ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ದಾಖಲಾಗಿದ್ದ, ಪುಂಡರು ಕ್ಯಾಬ್ ಚಾಲಕನನ್ನು ಅಡ್ಡಗಟ್ಟಿ ಥಳಿಸಿದ ಘಟನೆ ನಡೆದಿದೆ. ಒಂದೇ ವಾರದಲ್ಲಿ ಇಂತಹ ಮೂರು ಘಟನೆಗಳು ನಡೆದಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕ್ಯಾಬ್ ಅಡ್ಡಗಟ್ಟಿದ ಪುಂಡರು ಚಾಲಕನಿಗೆ ಥಳಿಸಿದ್ದಾರೆ. ಜಾಗ ಯಾಕೆ ಬಿಡಲಿಲ್ಲ , ನಿಂಗೆ ಲೈಸೆನ್ಸ್ ಯಾರು ಕೊಟ್ಟಿದ್ದು ಎಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ನವೀನ್ ಕುಮಾರ್ ಎಂಬುವವರು ದೂರು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
https://twitter.com/naveen_3131/status/1776050174458298380
https://twitter.com/naveen_3131/status/1776050053423231272?ref_src=twsrc%5Etfw%7Ctwcamp%5Etweetembed%7Ctwterm%5E1776050174458298380%7Ctwgr%5E6ac1bbfe2efbec854ef1da713fb0b7373e1a9986%7Ctwcon%5Es2_&ref_url=https%3A%2F%2Fvistaranews.com%2Fcrime%2Fanother-road-rage-in-bangalore-streets-assault-by-two-wheeler-riders-to-cabd-driver%2F625861.html
ಬೆಂಗಳೂರಲ್ಲಿ ಕಾರು ಫಾಲೋ ಮಾಡಿ ಮಹಿಳೆಗೆ ಕಿರುಕುಳ ನೀಡಿದ ಪುಂಡರು
ಬೆಂಗಳೂರು : ಸ್ಕೂಟರ್ ನಲ್ಲಿ ಮಹಿಳೆಯಿದ್ದ ಕಾರನ್ನು ಹಿಂಬಾಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ ಘಟನೆ ಇತ್ತೀಚೆಗೆ ನಡೆದಿತ್ತು.
ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಸ್ಕೂಟರ್ ನಲ್ಲಿ ಬಂದ ಪುರುಷರ ಕ್ಯಾಬ್ ಕಾರನ್ನು ಹಿಂಬಾಲಿಸಿ, ಕಿಟಕಿಗಳನ್ನು ಬಡಿದು ಅದರ ಬಾಗಿಲುಗಳನ್ನು ಓಪನ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಮೂವರು ಪುರುಷರು ತಮ್ಮ ವಾಹನವನ್ನು ಬೆನ್ನಟ್ಟುತ್ತಿದ್ದಂತೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.ಘಟನೆಗೆ ಪ್ರತಿಕ್ರಿಯಿಸಿದ ಆಗ್ನೇಯ ಪೊಲೀಸ್ ಡಿಸಿಪಿ ಸಿ.ಕೆ.ಬಾಬಾ, ಮೂವರು ಆರೋಪಿಗಳನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದರು.