ಅಸಲಿ ನಾಮಪತ್ರವನ್ನೇ ಮರೆತುಬಂದ ಕಾಂಗ್ರೆಸ್ ಅಭ್ಯರ್ಥಿ; ಪಿಎ ಎಡವಟ್ಟಿಗೆ ಪೇಚಿಗೆ ಸಿಲುಕಿದ ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅಸಲಿ ನಾಮಪತ್ರವನ್ನೇ ಮರೆತು ಬಂದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಇಂದು ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು, ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಅಸಲಿ ನಾಮಪತ್ರ ಮರೆತು ಬಂದಿರುವುದು ಗೊತ್ತಾಗಿದೆ. ಪಿಎ ಮಾಡಿದ ಎಡವಟ್ಟಿಗೆ ರಕ್ಷಾ ರಾಮಯ್ಯ ಡಿಸಿ ಕಚೇರಿಯಲ್ಲಿ ಪೇಚಿಗೆ ಸಿಲುಕಿದ್ದಾರೆ.

ಎರಡು ತಂಡಗಳಲ್ಲಿ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು. ಅದರಂತೆ ರಕ್ಷಾ ರಾಮಯ್ಯ ಮೊದಲ ತಂಡದ ಜೊತೆ ನಾಮಪತ್ರ ಹಾಕಿದ್ದರು. ಈ ವೇಳೆ ಅವರು ಎರಡನೇ ತಂಡದವರ ಜೊತೆ ಆಗಮಿಸಿದ್ದು, ಎರಡನೇ ತಂಡದವರ ಜೊತೆ ಸಲ್ಲಿಸಲು ಅಸಲಿ ನಾಮಪತ್ರವೇ ಇರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸರಗೊಂದ ರಕ್ಷಾ ರಾಮಯ್ಯ ಚುನಾವಣಾಧಿಕಾರಿ ಚೇಂಬರ್ ಹೊರಗೆ ಬಂದು ಎಲ್ಲಾರೊಂದಿಗು ಫೋಟೋ ತೆಗೆಸಿಕೊಂಡು ಕಚೇರಿಯಿಂದ ವಾಪಾಸ್ ಬಂದ ಪ್ರಸಂಗ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read