ಬೆಂಗಳೂರು : ಶಿಕ್ಷಣ ಹಕ್ಕು ಕಾಯ್ದೆ(RTE) ಅಡಿ ಅರ್ಜಿ ಸಲ್ಲಿಸಲು ಮೇ 20ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಮೇ.20 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ನಡೆಸಲು ಉಲ್ಲೇಖ-03ರ ಸುತ್ತೋಲೆಯನ್ವಯ ಕ್ರಮವಹಿಸಲಾಗಿದೆ. ಕಾರ್ಯಸೂಚಿಯನ್ವಯ ಆರ್.ಟಿ.ಇ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿ 22.04.2024 ಎಂದು ನಿಗದಿಪಡಿಸಲಾಗಿತ್ತು. ಉಪನಿರ್ದೇಶಕರುಗಳಿಂದ ಸ್ವೀಕೃತಗೊಂಡ ಮನವಿಗಳ ಮೇರೆಗೆ ಅರ್ಜಿ ಸಲ್ಲಿಸುವ ಅವಧಿಯ ದಿನಾಂಕವನ್ನು 20.05.2024ರವರೆಗೆ ವಿಸ್ತರಿಸಲಾಗಿದೆ ಹಾಗೂ ಪರಿಷ್ಕೃತ ವೇಳಾಪಟ್ಟಿಯನ್ನು ಲಗತ್ತಿಸಿದೆ.
ಶೇ.25 ರಷ್ಟು ಸೀಟುಗಳು ಉಚಿತ ಪ್ರವೇಶಕ್ಕೆ ಲಭ್ಯವಿರುವ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕಾಲಾವಕಾಶವನ್ನು ಶಿಕ್ಷಣ ಇಲಾಖೆ ಸುಮಾರು ಒಂದು ತಿಂಗಳು ವಿಸ್ತರಿಸಿದೆ. ಆರ್ಟಿಇ ಸೀಟಿಗೆ ಅರ್ಜಿ ಸಲ್ಲಿಸಲು ಈ ಮೊದಲು ಏ.22ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಮೇ 20ರವರೆಗೆ ವಿಸ್ತರಿಸಲಾ ಗಿದೆ.