ವಿ ಶಿವಕುಮಾರ್ ನಿರ್ದೇಶನದ ‘ನಾ ನಿನಗೆ ನೀ ಎನಗೆ’ ಕಿರು ಚಿತ್ರದ ‘ಕಣ್ಣಲ್ಲೇ ಕಣ್ಣಲ್ಲೇ’ ಎಂಬ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ರೋಶ್ ಮತ್ತು ಅರ್ಪಿತ ವೇಣು ಧ್ವನಿಯಾಗಿದ್ದು, ತ್ಯಾಗರಾಜು ಎಂಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಭರತ್ ವೆಂಕಟಸ್ವಾಮಿ ಸಾಹಿತ್ಯವಿದೆ.
ಈ ಚಿತ್ರವನ್ನು ಎಸ್ ಎಸ್ ಕೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶಶಿಕುಮಾರ್ ಗಣೇಶ್ ನಿರ್ಮಾಣ ಮಾಡಿದ್ದು, ಖುಶ್ ಮತ್ತು ”ನೀನಾದೆನಾ” ಧಾರಾವಾಹಿಯ ನಟಿ ಖುಷಿ ಶಿವು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ತಿಮ್ಮಯ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ತ್ಯಾಗರಾಜು ಎಂಎಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.