ಸಂಜೆಯ ವೇಳೆಗೆ ಅಥವಾ ರಾತ್ರಿ ಉಗುರುಗಳನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಿರ್ತಾರೆ. ಇದಲ್ಲದೆ ಮಂಗಳವಾರ ಮತ್ತು ಗುರುವಾರದಂತಹ ಕೆಲವು ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖವಿದೆ.
ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ನಂತರ ಮತ್ತು ವಾರದ ಕೆಲವು ದಿನ ಉಗುರು ಮತ್ತು ಕೂದಲನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ದೇವತೆಗಳು ಕೋಪಗೊಳ್ಳುತ್ತಾರೆ ಮತ್ತು ಜೀವನದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸರಿಯಾದ ಸಮಯ ಮತ್ತು ದಿನದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ, ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಸಂಪತ್ತನ್ನು ನೀಡುತ್ತಾಳೆ. ವಾರದ ಯಾವ ದಿನ ಉಗುರುಗಳನ್ನು ಕತ್ತರಿಸಿದರೆ ಏನೆಲ್ಲಾ ಫಲ ಸಿಗುತ್ತದೆ ಎಂದು ತಿಳಿಯೋಣ.
ಉಗುರು ಕತ್ತರಿಸಲು ಶುಭ ದಿನ
ವಾರದ ವಿವಿಧ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ನಮ್ಮ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಹಿಂದೂ ಧರ್ಮದ ಜೊತೆಗೆ ಇಸ್ಲಾಂನಲ್ಲಿ ಕೂಡ ಉಗುರು ಕತ್ತರಿಸುವ ಸುನ್ನತ್ ವಿಧಾನವನ್ನು ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ರಾತ್ರಿ ಉಗುರು ಕತ್ತರಿಸುವುದು ನಿಷಿದ್ಧ. ರಾತ್ರಿ ಉಗುರು ಕತ್ತರಿಸುವುದು ಬಡತನಕ್ಕೆ ಕಾರಣವಾಗುತ್ತದೆ.
ಸೋಮವಾರ- ಸೋಮವಾರ ಉಗುರು ಕತ್ತರಿಸುವುದರಿಂದ ತಮೋಗುಣ ದೂರವಾಗುತ್ತದೆ. ಆದ್ದರಿಂದ ಸೋಮವಾರ ಉಗುರು ಮತ್ತು ಕೂದಲನ್ನು ಕತ್ತರಿಸಬಹುದು.
ಮಂಗಳವಾರ – ಮಂಗಳವಾರ ಉಗುರುಗಳನ್ನು ಕತ್ತರಿಸಬಾರದು. ಈ ದಿನ ಆಂಜನೇಯನನ್ನು ಪೂಜಿಸಲಾಗುತ್ತದೆ. ಆದರೆ ಮಂಗಳವಾರ ಉಗುರುಗಳನ್ನು ಕತ್ತರಿಸಿದರೆ ಸಾಲದಿಂದ ಮುಕ್ತಿ ಪಡೆಯಬಹುದು ಎಂಬ ಉಲ್ಲೇಖ ಅನೇಕ ಧಾರ್ಮಿಕ ಗ್ರಂಥಗಳಲ್ಲಿದೆ.
ಬುಧವಾರ- ಬುಧವಾರ ಉಗುರು ಕತ್ತರಿಸಲು ಅತ್ಯಂತ ಮಂಗಳಕರ ದಿನ. ಇದು ಆರ್ಥಿಕ ಲಾಭವನ್ನು ತರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯ ಜೊತೆಗೆ ಗಳಿಕೆ ಹೆಚ್ಚುತ್ತದೆ.
ಗುರುವಾರ – ಗುರುವಾರ ಉಗುರುಗಳನ್ನು ಕತ್ತರಿಸಬಾರದು. ಇದು ವಿಷ್ಣುವಿನ ದಿನ. ಗುರುವಾರ ಉಗುರುಗಳನ್ನು ಕತ್ತರಿಸಿದರೆ ಅದೃಷ್ಟ ದುರದೃಷ್ಟವಾಗಿ ಪರಿವರ್ತನೆಯಾಗುತ್ತದೆ.
ಶುಕ್ರವಾರ – ಶುಕ್ರವಾರ ಉಗುರುಗಳನ್ನು ಕತ್ತರಿಸುವುದು ಅತ್ಯಂತ ಮಂಗಳಕರ. ಶುಕ್ರವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಶುಕ್ರ ಗ್ರಹದ ಅನುಗ್ರಹದಿಂದ ಸೌಂದರ್ಯವು ಹೆಚ್ಚಾಗುತ್ತದೆ. ಜೀವನದಲ್ಲಿ ಸಂಪತ್ತು, ಸಮೃದ್ಧಿ ಸಿಗುತ್ತದೆ.
ಶನಿವಾರ – ಶನಿವಾರ ಉಗುರುಗಳನ್ನು ಕತ್ತರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಗೊಂದಲವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿವಾರ ಉಗುರುಗಳನ್ನು ಕತ್ತರಿಸಬಾರದು, ಅದು ಶನಿದೇವನ ಕೋಪಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ಬಡತನ, ಮಾನಸಿಕ ಮತ್ತು ದೈಹಿಕ ನೋವು ಇತ್ಯಾದಿಗಳನ್ನು ಉಂಟುಮಾಡುತ್ತದೆ.
ಭಾನುವಾರ – ಭಾನುವಾರ ಕೂಡ ಉಗುರುಗಳನ್ನು ಕತ್ತರಿಸಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಭಾನುವಾರ ಉಗುರುಗಳನ್ನು ಕತ್ತರಿಸುವುದರಿಂದ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಮತ್ತು ಯಶಸ್ಸಿಗೆ ಅಡ್ಡಿಯಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ ಭಾನುವಾರ ರಜಾ ದಿನವಾದ್ದರಿಂದ ಬಹುತೇಕರು ಈ ದಿನ ಉಗುರು, ಕೂದಲನ್ನು ಕತ್ತರಿಸುತ್ತಾರೆ.