ಮಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಶಾಂತಿಯುತ ಮತದಾನಕ್ಕಾಗಿ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ರೌಡಿಗಳು ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವವರ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನಷ್ಟು ಕಾನೂನು ಕ್ರಮಗಳನು ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಮಿಷ್ನರೇಟ್ ವ್ಯಾಪ್ತಿಯಲ್ಲಿ ನಾಲ್ಕು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ (29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ (36), ಕುದ್ರೋಳಿ ನಿವಾಸಿ ಅನೀಸ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ (39) ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
ಆರೋಪಿ ಹೇಮಚಂದ್ರ ವಿರುದ್ಧ ಕಿಡ್ನ್ಯಾಪ್, ಕೊಲೆಯತ್ನ ಸೇರಿ ಒಟ್ಟು 17 ಕೆಸ್ ಗಳಿದ್ದರೆ, ಅನೀಸ್ ವಿರುದ್ಧ ಡ್ರಗ್ಸ್, ಗಲಭೆ ಸೇರಿದಂತೆ 18 ಕೇಸ್ ಗಳಿವೆ. ನವಾಜ್ ವಿರುದ್ಧ 13 ಹಾಗೂ ಚರಣ್ ಶೇಟ್ ವಿರುದ್ಧ 11 ಕೇಸ್ ಗಳಿವೆ. ಈ ಹಿನ್ನೆಲೆಯಲ್ಲಿ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿ ಮಂಗಳೂರು ಪೊಲೀಸ್ ಕಮಿಷ್ನರ್ ಆದೇಶ ಹೊರಡಿಸಿದ್ದಾರೆ.