ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೇಟೆಂಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ 72 ಲಕ್ಷ ರೂಪಾಯಿ ಮೌಲ್ಯದ ಕ್ಯಾನ್ಸರ್ ಔಷಧವ ಇನ್ನು 3 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ.
ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸುವ ಓಲಾಪರಿಬ್ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಇದುವರೆಗೂ 72 ಲಕ್ಷ ರೂಪಾಯಿ ದರದಲ್ಲಿದ್ದ ಔಷಧ ಇನ್ನೂ 3 ಲಕ್ಷ ರೂ.ಗೆ ಲಭ್ಯವಾಗಲಿದೆ.
ಝೈಡಸ್ ಲೈಫ್ ಸೈನ್ಸಸ್ ಔಷಧ ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು, ಔಷಧ ತಯಾರಿಸಿದ್ದ ಮೂಲ ಕಂಪನಿ ಪೇಟೆಂಟ್ ಅವಧಿ ಮುಗಿ ಹಿನ್ನೆಲೆಯಲ್ಲಿ ಮೂಲ ಔಷಧದ ಜೆನೆರಿಕ್ ಮಾದರಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ಭಾರತದಲ್ಲಿ ಪ್ರತಿವರ್ಷ 14 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಲಿದ್ದು, ಇವುಗಳಲ್ಲಿ 2.75 ಲಕ್ಷ ಜನ ಸ್ತನ, ಗರ್ಭಕೋಶ, ಮೆದೋಜೀರಕ ಗ್ರಂಥಿಯ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಲು ಓಲಾಪರಿಬ್ ಬಳಕೆ ಮಾಡಲಾಗುವುದು. ಒಂದು ವರ್ಷದ ಚಿಕಿತ್ಸೆಗೆ ಇದುವರೆಗೂ 75 ಲಕ್ಷ ರೂ.ಗಳನ್ನು ಔಷಧಿಗೆ ಖರ್ಚು ಮಾಡಬೇಕಿತ್ತು. ಅದೇ ಔಷಧಿಯನ್ನು ಕೇವಲ ಮೂರು ಲಕ್ಷ ರೂ.ಗೆ ಸಿಗಲಿದೆ ಎಂದು ಹೇಳಲಾಗಿದೆ.
ಪೇಟೆಂಟ್ ಮುಗಿಯುತ್ತಿದ್ದಂತೆ 72 ಲಕ್ಷ ರೂ. ಕ್ಯಾನ್ಸರ್ ಔಷಧಿ ಈಗ 3 ಲಕ್ಷ ರೂ.ಗೆಲ್ಲಿ ಲಭ್ಯವಿದೆ. ರೋಗಿಗಳಿಗೆ ಕೈಗೆಟಕುವ ದರದಲ್ಲಿ ಔಷಧ ತಲುಪಿಸಲು ಝೈಡಸ್ ಲೈಫ್ ಸೈನ್ಸಸ್ ಆಫ್ ಇಂಡಿಯಾದಿಂದ ಕ್ಯಾನ್ಸರ್ ವಿರೋಧಿ ಔಷಧಿ ಒಲಾಪರಿಬ್‌ನ ಜೆನೆರಿಕ್ ಆವೃತ್ತಿಯನ್ನು ಪರಿಚಯಿಸಲಾಗಿದೆ. ಔಷಧದ ಕಡಿಮೆ ವೆಚ್ಚವು ಚಿಕಿತ್ಸೆಯ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಸ್ತನ, ಅಂಡಾಶಯ, ಪ್ರಾಸ್ಟೇಟ್ ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಹಿಡಿದು ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ, ಈ ಜೆನೆರಿಕ್ ಔಷಧವು ನಿರ್ದಿಷ್ಟ ಆನುವಂಶಿಕ ರೂಪಾಂತರಗಳನ್ನು ಗುರಿಪಡಿಸುತ್ತದೆ ಎಂದು ಹೇಳಲಾಗಿದೆ.