alex Certify ಕೋಟಾ ಕೋಚಿಂಗ್ ಸೆಂಟರ್ ನಲ್ಲಿದ್ದ ವಿದ್ಯಾರ್ಥಿನಿ ಅಪಹರಿಸಿ 30 ಲಕ್ಷ ರೂ.ಗೆ ಬೇಡಿಕೆ: ಸುರಕ್ಷಿತ ಬಿಡುಗಡೆಗೆ ಸಿಎಂ ಭಜನ್ ಲಾಲ್ ಗೆ ಕರೆ ಮಾಡಿದ ಕೇಂದ್ರ ಸಚಿವ ಸಿಂಧಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಾ ಕೋಚಿಂಗ್ ಸೆಂಟರ್ ನಲ್ಲಿದ್ದ ವಿದ್ಯಾರ್ಥಿನಿ ಅಪಹರಿಸಿ 30 ಲಕ್ಷ ರೂ.ಗೆ ಬೇಡಿಕೆ: ಸುರಕ್ಷಿತ ಬಿಡುಗಡೆಗೆ ಸಿಎಂ ಭಜನ್ ಲಾಲ್ ಗೆ ಕರೆ ಮಾಡಿದ ಕೇಂದ್ರ ಸಚಿವ ಸಿಂಧಿಯಾ

ನವದೆಹಲಿ: ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿದ್ದ ಮಧ್ಯಪ್ರದೇಶದ ಶಿವಪುರಿ ಮೂಲದ ವಿದ್ಯಾರ್ಥಿನಿಯನ್ನು ಸೋಮವಾರ ಪಹರಿಸಲಾಗಿದೆ.

ಸದ್ಯ ಕಿಡ್ನಾಪ್ ಆದ ವಿದ್ಯಾರ್ಥಿನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅಪಹರಣಕ್ಕೆ ಕಾರಣರಾದ ಪಾತಕಿಗಳು ವಿದ್ಯಾರ್ಥಿನಿಯ ಫೋಟೋವನ್ನು ಆಕೆಯ ತಂದೆಗೆ ಕಳುಹಿಸಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

ಅಪಹರಣ ಮತ್ತು ಹಣಕ್ಕೆ ಭೇಡಿಕೆ ಇಟ್ಟಿರುವ ವಿಷಯ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಗಮನಕ್ಕೆ ಬಂದಿದೆ. ಅವರು ಈ ಸಂಬಂಧ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ. ‘ನಮ್ಮ ಮಗಳು ಬೇಗ ಮರಳಿ ಬರಬೇಕು’ ಎಂದು ಹೇಳುವ ಮೂಲಕ ಪರಿಸ್ಥಿತಿಯ ತುರ್ತನ್ನು ಒತ್ತಿ ಹೇಳಿದ್ದಾರೆ.

ಅಪಹರಣಕ್ಕೊಳಗಾದ ವಿದ್ಯಾರ್ಥಿನಿ ಶಿವಪುರಿಯ ಪ್ರಬಲ ಸಮುದಾಯಕ್ಕೆ ಸೇರಿದವಳು. ರಾಜಸ್ಥಾನದ ಕೋಟಾದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಾರ್ಚ್ 18 ರಂದು ಆಕೆ ನಾಪತ್ತೆಯಾಗಿದ್ದು, ನಂತರ ಅಪಹರಣಕಾರರು ಆಕೆಯ ಫೋಟೋವನ್ನು ಆಕೆಯ ತಂದೆಗೆ ಕಳುಹಿಸಿ 30 ಲಕ್ಷ ರೂ. ಹಣ ಕೊಡದಿದ್ದರೆ ಮಗಳಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸಿಂಧಿಯಾ ಭಜನ್ ಲಾಲ್‌ಗೆ ಕರೆ ಮಾಡಿ ಮಾತನಾಡಿ ಮಗಳು ಸುರಕ್ಷಿತವಾಗಿ ಹಿಂದಿರುಗುವ ಬಗ್ಗೆ ಸಂತ್ರಸ್ತ ತಂದೆಗೆ ಭರವಸೆ ನೀಡಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂಪಾಯಿ ಬಹುಮಾನ ನೀಡುವುದಾಗಿ ಕೋಟ ಎಸ್ಪಿ ಘೋಷಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...