ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಲ್ಲಿ ತೊಡೆಗಳಲ್ಲಿ ಕೊಬ್ಬು ಶೇಖರಣೆ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ತೆಳ್ಳಗಿರುವವರಿಗೂ ತೊಡೆಯಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿರುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣ ಜೆನೆಟಿಕ್ಸ್, ಹೆಚ್ಚುತ್ತಿರುವ ವಯಸ್ಸು ಮತ್ತು ಹಾರ್ಮೋನುಗಳ ಬದಲಾವಣೆಗಳು. ಅಂತಹ ಪರಿಸ್ಥಿತಿಯಲ್ಲಿ ತೊಡೆಗಳ ಕೊಬ್ಬನ್ನು ನಿವಾರಿಸಿ ಸುಂದರ ಆಕಾರದಲ್ಲಿ ಇರಿಸಿಕೊಳ್ಳಲು ಬಯಸಿದರೆ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಬೇಕು.
ಉಪ್ಪು ಕಡಿಮೆ ತಿನ್ನಿರಿ
ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ತೊಡೆಗಳು ಸೇರಿದಂತೆ ದೇಹದ ಅನೇಕ ಭಾಗಗಳ ಆಕಾರವು ಉಬ್ಬುವಿಕೆಯಿಂದ ಬದಲಾಗಲು ಪ್ರಾರಂಭಿಸುತ್ತದೆ. ದೇಹದಲ್ಲಿ ನೀರಿನ ಧಾರಣವನ್ನು ತಡೆಗಟ್ಟಲು ಉಪ್ಪನ್ನು ಕಡಿಮೆ ಸೇವಿಸಿ.
ಎಲೆಕ್ಟ್ರಾನ್‌ಗಳ ಸೇವನೆ ಹೆಚ್ಚಿಸಿ
ಎಲೆಕ್ಟ್ರೋಲೈಟ್ಸ್ ಎಂದರೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್. ಇದರ ಸೇವನೆಯು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ದೇಹವು ಕೊಬ್ಬನ್ನು ತ್ವರಿತವಾಗಿ ಸುಡಲು ಸಾಧ್ಯವಾಗುತ್ತದೆ.
ಕಡಿಮೆ ಕಾರ್ಬ್ ಆಹಾರ ಸೇವಿಸಿ
ಕಾರ್ಬೋಹೈಡ್ರೇಟ್ಗಳು ಗ್ಲೈಕೋಜೆನ್ ಆಗಿ ಪರಿವರ್ತನೆಗೊಳ್ಳುತ್ತವೆ ಮತ್ತು ನೀರಿನೊಂದಿಗೆ ಯಕೃತ್ತು ಮತ್ತು ಸ್ನಾಯುಗಳಲ್ಲಿ ಸಂಗ್ರಹವಾಗುತ್ತವೆ. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದರೆ ದೇಹದಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತದೆ. ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಬೊಜ್ಜು ಕಡಿಮೆ ಮಾಡಲು ಸುಲಭವಾಗುತ್ತದೆ.
ಮೆಟ್ಟಿಲುಗಳನ್ನು ಹತ್ತಿ-ಇಳಿಯಿರಿ
ಜಿಮ್ ಇಲ್ಲದೆ ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಬಯಸಿದರೆ, ಇಂದಿನಿಂದಲೇ ಲಿಫ್ಟ್ ಮಾಡುವ ಬದಲು ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿ. ಇದು ಅತ್ಯಂತ ಶಕ್ತಿಯುತವಾದ ವ್ಯಾಯಾಮವಾಗಿದ್ದು ತೊಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ.
ಕಾರ್ಡಿಯೋ ವ್ಯಾಯಾಮ
ತೊಡೆಯ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಕಾರ್ಡಿಯೋ ಅತ್ಯುತ್ತಮ ಮಾರ್ಗವಾಗಿದೆ. ಇದಕ್ಕಾಗಿ ರನ್ನಿಂಗ್, ಡಾನ್ಸ್ ಕೂಡ ಮಾಡಬಹುದು.
ಸೈಕ್ಲಿಂಗ್
ಸೈಕ್ಲಿಂಗ್ ಕೂಡ ತೊಡೆಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ತೊಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ.