ಬ್ಯಾಂಕಾಕ್ : ಲೈಂಗಿಕ ಸುಖಕ್ಕಾಗಿ ಶಿಶ್ನಕ್ಕೆ 11 ಉಂಗುರ ಹಾಕಿದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಆಘಾತಕಾರಿ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.
ಲೈಂಗಿಕ ಸುಖಕ್ಕಾಗಿ ವ್ಯಕ್ತಿಯೋರ್ವ ಮೊದಲು ಒಂದು ಉಂಗುರು ಹಾಕಿದ್ದಾನೆ, ನಂತರ ಹೆಚ್ಚಿನ ಸುಖ ಪಡೆಯಲು ಇನ್ನಷ್ಟು ಉಂಗುರು ಹಾಕಿಕೊಂಡಿದ್ದಾನೆ. ಪರಿಣಾಮ ವ್ಯಕ್ತಿಯ ಶಿಶ್ನವು ಊದಿಕೊಂಡಿದ್ದು, ತೀವ್ರತರವಾದ ಗಾಯವಾಗಿದೆ. ಪರಿಣಾಮ ಆತ ಪ್ರಜ್ಞೆ ಕಳೆದುಕೊಂಡಿದ್ದು, ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಶ್ನವು ಎಷ್ಟು ಊದಿಕೊಂಡಿತ್ತೆಂದರೆ ಉಂಗುರವನ್ನು ಕತ್ತರಿಸಲು ವೈದ್ಯರು ಹೆಣಗಾಡಿದರು.
ಆದರೆ ಅದೃಷ್ಟವಶಾತ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ರೋಗಿಯನ್ನು ಥೈಲ್ಯಾಂಡ್ ನ ಬ್ಯಾಂಕಾಕ್ ಆಸ್ಪತ್ರೆಯ ವಾರ್ಡ್ ನಲ್ಲಿ ಕೆಲವು ದಿನ ಚಿಕಿತ್ಸೆ ನೀಡಲಾಗಿದೆ. ಏಕವ್ಯಕ್ತಿ ಲೈಂಗಿಕ ಕ್ರಿಯೆಯ ಸುಖಕ್ಕಾಗಿ ಈತ ಶಿಶ್ನಕ್ಕೆ ಉಂಗುರ ಸಿಕ್ಕಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.