ರಾಜಧಾನಿ ರೇಕ್ಜಾವಿಕ್ನಿಂದ ನೈಋತ್ಯಕ್ಕೆ 80 ಕಿ.ಮೀ ದೂರದಲ್ಲಿರುವ ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ ಮತ್ತೊಂದು ಜ್ವಾಲಾಮುಖಿ ಸ್ಫೋಟ ಸಂಭವಿಸಿದ್ದರಿಂದ ದಕ್ಷಿಣ ಐಸ್ಲ್ಯಾಂಡ್ನಲ್ಲಿ ಶನಿವಾರ (ಮಾರ್ಚ್ 16) ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಜ್ವಾಲಾಮುಖಿ ಸ್ಫೋಟ ಸಂಭವಿಸಿದ್ದರಿಂದ ಗ್ರೈಂಡವಿಕ್ ಎಂಬ ಸಣ್ಣ ಪಟ್ಟಣದ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ.
ಐಸ್ಲ್ಯಾಂಡ್ನ ನಾಗರಿಕ ರಕ್ಷಣಾ ಸೇವೆಯ ಪ್ರಕಾರ, ಗ್ರೈಂಡವಿಕ್ನ ಉತ್ತರದಲ್ಲಿರುವ ಹಗಾಫೆಲ್ ಮತ್ತು ಸ್ಟೋರಾ-ಸ್ಕೋಗ್ಫೆಲ್ ನಡುವೆ ಶನಿವಾರ ಸ್ಥಳೀಯ ಸಮಯ 20:00 (20:00 ಜಿಎಂಟಿ) ನಂತರ ಸ್ಫೋಟ ಪ್ರಾರಂಭವಾಯಿತು.