ಶಿವಮೊಗ್ಗ: ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಲ್ಲುವುದು ಖಚಿತ ಎಂದು ಮಾಜಿ ಸಚಿವ ಕೆ.ಎಸ್.ಈಸ್ವರಪ್ಪ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ತಂದೆ-ಮಕ್ಕಳ ಕೈಗೆ ಪಕ್ಷ ಸಿಲುಕಿ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ. ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಹೋರಾಟ ನಡೆಯಲಿದೆ. ನನ್ನ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ. ಸ್ವತಂತ್ರವಾಗಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಲಿಂಗಾಯಿತ ಯತ್ನಾಳ್, ಒಕ್ಕಲಿಗ ಸಿ.ಟಿ.ರವಿ, ಹಿಂದುಳಿದ ನನಗೆ ಕೊಡಬೇಕಿತ್ತು. ಆದರೆ ಯಾಕೆ ಕೊಟ್ಟಿಲ್ಲ? ಪಕ್ಷ ಸಂಘಟನೆ ದೃಷ್ಟಿಯಿಂದ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದನ್ನು ಬಿಟ್ಟು ಬಿ.ವೈ.ವಿಜಯೇಂದ್ರಗೆ ನೀಡಿದರು. ನಾನು ಹಿಂದುತ್ವ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ಬಿ.ವೈ.ರಾಘವೇಂದ್ರ ಲಿಂಗಾಯಿತ ಅಂತಾ ಚುನವಣೆ ಮಾಡುತ್ತಿದ್ದಾರೆ. ಅವರು ಲಿಂಗಾಯಿತರಿಗೆ ಏನು ಕೊಟ್ಟಿದ್ದಾರೆ. ಸ್ಪರ್ಧೆ ಘೋಷಣೆ ಬಳಿಕ ನನಗೆ ರಾಜ್ಯಾಧ್ಯಂತ ಬೆಂಬಲ ಸಿಗಲಿದೆ ಎಂದಿದ್ದಾರೆ.