
ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿರುವ ಸಮನ್ಸ್ ಗೆ ತಡೆ ನೀಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿದ ಮನವಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಶನಿವಾರ(ನಾಳೆ) ಹಾಜರಾಗುವಂತೆ ಹೇಳಿದೆ.
ತನಗೆ ನೀಡಿದ ಸಮನ್ಸ್ ತಪ್ಪಿಸಲು ಇಡಿ ಸಲ್ಲಿಸಿದ ಎರಡು ದೂರುಗಳನ್ನು ಪರಿಗಣಿಸಿದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಸಮನ್ಸ್ ಅನ್ನು ಕೇಜ್ರಿವಾಲ್ ಪ್ರಶ್ನಿಸಿದ್ದರು. ಸಮನ್ಸ್ ಗೆ ತಡೆ ನೀಡುವಂತೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ದೆಹಲಿ ಕೋರ್ಟ್ ನಾಳೆ ಹಾಜರಾಗುವಂತೆ ಸೂಚಿಸಿದೆ.