ಗದಗ: ಹಣ ಹಂಚಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಕ್ಕಳಿಬ್ಬರು ತಂದೆಯನ್ನೇ ರಾಡ್ ನಿಂದ ಹೊಡೆದು ಕೊಂದ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಕರಿಯಲ್ಲಪ್ಪನವರ್ (52) ಮೃತ ದುರ್ದೈವಿ. ಕರಿಯಲ್ಲಪ್ಪನವರ್ ತನ್ನ 6 ಎಕರೆ ಜಮೀನಿನಲ್ಲಿ 3 ಎಕರೆ ಜಮೀನು ಮಾರಾಟ ಮಾಡಿದ್ದರು. ಜಮೀನು ಮಾರಿ ಬಂದ ಹಣ ಹಂಚಿಕೆ ವಿಚಾರವಾಗಿ ತಂದೆ ಹಾಗೂ ಮಕ್ಕಳ ನಡುವೆ ಗಲಾಟೆಯಾಗಿದೆ. ಎರಡನೇ ಪತ್ನಿ ಮಕ್ಕಳು ತಂದೆ ಕರಿಯಲ್ಲಪ್ಪನವರ್ ನನ್ನು ಕೂಡಿ ಹಾಕಿ ರಾಡ್ ನಿಂದ ಹೊಡೆದಿದ್ದರು.
ಎರಡನೇ ಪತ್ನಿ ರೇಖಾ ಎಂಬುವವರು ಜಮೀನಿಗೆ ತೆರಳಿದ್ದ ವೇಳೆ ಮೊದಲ ಪತ್ನಿ ಕಸ್ತೂರಮ್ಮ ಪುತ್ರರಾದ ಪ್ರಕಾಶ್, ಮಲ್ಲೇಶ್ ಮನೆಗೆ ಬಂದು ಗಲಾಟೆ ಮಾಡಿದ್ದರು. ಹಣ ಕೂಡಿ ಹಾಕಿ ರಾಡ್ ನಿಂದ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕರಿಯಲ್ಲಪ್ಪನವರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.