ಬೆಂಗಳೂರು : ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಮಾ.14 ಕ್ಕೆ ಮುಗಿಯಲಿದ್ದು, ಗುರುವಾರದಿಂದ ( ಮಾ.15) ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಹೌದು, ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಬುಧವಾರ ಮುಗಿಯಲಿದ್ದು, ಗುರುವಾರದಿಂದ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಫೆಬ್ರವರಿ 28 ರಂದು ಹೊರಡಿಸಿದ್ದ ಸುತ್ತೋಲೆಯಂತೆಯೇ ಶೇ 60ರಷ್ಟು ಕನ್ನಡ ಬಳಸದ ವಾಣಿಜ್ಯ ಮಳಿಗೆಗಳ ʼವ್ಯಾಪಾರ ಪರವಾನಗಿʼ ಅಮಾನತು ಮಾಡಿ, ಮಾರ್ಚ್ 14ರಿಂದ ಬೀಗ ಹಾಕಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.