ಅನೇಕರ ಅಚ್ಚುಮೆಚ್ಚಿನ ಆಹಾರ ದಾಲ್ ಫ್ರೈ. ಇದನ್ನು ಬೇರೆ ಬೇರೆ ವಿಧಾನದಲ್ಲಿ ತಯಾರಿಸಲಾಗುತ್ತದೆ. ದ್ವಿದಳ ಧಾನ್ಯ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹಾಗಾಗಿ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಈ ಧಾನ್ಯಗಳನ್ನು ಜನರು ಬಳಸ್ತಾರೆ. ನೀವು ನಿಮ್ಮದೇ ಶೈಲಿಯಲ್ಲಿ ದಾಲ್ ತಡ್ಕಾ ಮಾಡುತ್ತಿರಬಹುದು. ರೆಸ್ಟೋರೆಂಟ್ ಶೈಲಿಯಲ್ಲಿ ದಾಲ್ ತಡ್ಕಾ ಮಾಡೋದನ್ನು ಅನೇಕರು ಕಲಿತಿರುತ್ತಾರೆ. ಆದ್ರೆ ಇಂದು ನಾವು ಹೇಳ್ತಿರೋ ದಾಲ್ ತಡ್ಕಾ ಮಾಡೋದು ಸುಲಭವಲ್ಲ. ಅದಕ್ಕೆ 24 ಕ್ಯಾರೆಟ್ ಗೋಲ್ಡ್ ಹಾಕಲಾಗಿದೆ. ಬಂಗಾರ ಹಾಕಿರುವ ಈ ದಾಲ್ ಗೆ ದಾಲ್ ಕಷ್ಕನ್ ಎಂದು ಹೆಸರಿಡಲಾಗಿದೆ.
ನೀವಿದನ್ನು ತಿನ್ನಬೇಕು ಅಂದ್ರೆ ದುಬೈಗೆ ಹೋಗ್ಬೇಕು. ಅಲ್ಲಿನ ಬಾಣಸಿಗ ರಣವೀರ್ ಬ್ರಾರ್, 24 ಕ್ಯಾರೆಟ್ ಚಿನ್ನದಿಂದ ಮಾಡಿದ ಈ ದಾಲ್ ಸಿದ್ಧಪಡಿಸಿದ್ದಾರೆ. ಈ ದಾಲನ್ನು ಒಂದು ಬಾಕ್ಸ್ ನಲ್ಲಿ ಸುರಕ್ಷಿತವಾಗಿಟ್ಟು ಸರ್ವ್ ಮಾಡಲಾಗುತ್ತದೆ. ನಾಣ್ಯ, ಬಂಗಾರದ ಆಭರಣಗಳನ್ನು ಇಡಲು ನಾವು ಬಳಸುವ ಬಾಕ್ಸ್ ನಲ್ಲಿ ಈಗ ಈ ದಾಲ್ ಇಡಲಾಗುತ್ತಿದೆ. ಈ ದಾಲ್ ಬೆಲೆ 58 ದಿರ್ಹಾಮ್ ಅಂದ್ರೆ ಸುಮಾರು 1,300 ರೂಪಾಯಿ ಆಗಿದೆ.
ದಾಲ್ ಕಷ್ಕನ್ ಅನ್ನು ವಿಶ್ವದ ದುಬಾರಿ ದಾಲ್ ತಡ್ಕಾ ಎಂದು ಕರೆಯಲಾಗುತ್ತಿದೆ. ಈ ದಾಲ್ ರುಚಿ ಹೇಗಿದೆ ಅಂತಾ ಯಾರೂ ಹೇಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಜನರು ಒಮ್ಮೆ ಟೇಸ್ಟ್ ಮಾಡ್ಬೇಕು ಎನ್ನುತ್ತಿದ್ದಾರೆ.
https://www.instagram.com/p/C4DemsFPrSd/?utm_source=ig_embed&utm_campaign=embed_video_watch_again