ಬೆಂಗಳೂರು : ಕೆಪಿಎಸ್ ಸಿ ನೂತನ ಸದಸ್ಯರಾಗಿ ಡಿಐಜಿ ಎಂವಿ ರಾಮಕೃಷ್ಣ ಪ್ರಸಾದ್ ರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲನಾದ ನಾನು, ಥಾವರ್ಚಂದ್ ಗೆಹೋಟ್, ಭಾರತ ಸಂವಿಧಾನದ ಅನುಚ್ಛೇದ 316ರ ಖಂಡ (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿಯಿರುವ ಸದಸ್ಯರ ಸ್ನಾನಕ್ಕೆ ಈ ಕೆಳಕಂಡ ವ್ಯಕ್ತಿಯನ್ನು ನೇಮಿಸಿದ್ದೇನೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.