ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವೀಡಿಯೊ ತುಣುಕುಗಳು ಹೊರಬಂದಿದ್ದು, ನಿಜ್ಜರ್ ಅವರನ್ನು ಸಶಸ್ತ್ರ ವ್ಯಕ್ತಿಗಳು ಗುಂಡಿಕ್ಕಿ ಕೊಂದಿರುವ ವಿಡಿಯೋ ವೈರಲ್ ಆಗಿದೆ.
2020 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ನಿಜ್ಜರ್, ಜೂನ್ 18, 2023 ರ ಸಂಜೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದಿಂದ ಹೊರಬರುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು. ದಾಳಿಯಲ್ಲಿ ಆರು ಪುರುಷರು ಮತ್ತು ಎರಡು ವಾಹನಗಳು ಭಾಗಿಯಾಗಿದ್ದವು.