ನವದೆಹಲಿ: ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ.) ಮೂಲಕ ಭತ್ತದ ಜೊತೆಗೆ ಮಿಶ್ರ ಬೆಳೆ ಆರಿಸಿಕೊಳ್ಳುವ ರೈತರಿಂದ ದ್ವಿದಳ ಧಾನ್ಯಗಳಾದ ತೊಗರಿ, ಉದ್ದು, ಮೆಕ್ಕೆಜೋಳ ಖರೀದಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದರೊಂದಿಗೆ ಯಾವುದೇ ಷರತ್ತುಗಳಿಲ್ಲದೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ನಾಫೆಡ್ ಮತ್ತು ಎನ್ಸಿಸಿಎಫ್ ನಂತಹ ಸರ್ಕಾರಿ ಸಂಸ್ಥೆಗಳು 5 ವರ್ಷಗಳವರೆಗೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಉತ್ಪನ್ನಗಳನ್ನು ಖರೀದಿಸಲಿವೆ. ರೈತರು ಆಧಾರ್ ಸಂಖ್ಯೆ ನೀಡಿ ವಿವರ ಸಲ್ಲಿಸುವ ಮೂಲಕ ನಿಗದಿತ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ವೆಬ್ಸೈಟ್ ರಚಿಸಲಿದೆ.
ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ ಶೀಘ್ರವೇ ಎಂ.ಎಸ್.ಪಿ. ದರದಲ್ಲಿ ಭತ್ತದ ಜೊತೆಗೆ ತೊಗರಿ, ಉದ್ದು ,ಮೆಕ್ಕೆಜೋಳ, ಹತ್ತಿ ಖರೀದಿಸಲು ಮುಂದಾಗಿದೆ ಎಂದು ಹೇಳಲಾಗಿದೆ.