ಪ್ರೀತಿಗೆ ಯಾವುದೇ ಜಾತಿ ಧರ್ಮವಿಲ್ಲ ಎಂದು ಹೇಳಲು ಹೊರಟಿರುವ ಶಶಿ ಅಭಿನಯದ ‘ಮೆಹಬೂಬಾ ಚಿತ್ರ ಮಾರ್ಚ್ 15ರಂದು ತೆರೆ ಮೇಲೆ ಬರಲು ಸಜ್ಜಾಗಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೆಹಬೂಬ ಚಿತ್ರಕಂಡ ನಾಳೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ವೀಕ್ಷಿಸಬಹುದಾಗಿದೆ.
ಅನುಪ್ ಆಂಟೋನಿ ಆಕ್ಷನ್ ಕಟ್ ಹೇಳಿರುವ ನೈಜ ಘಟನಾಧಾರಿತ ಈ ಚಿತ್ರದಲ್ಲಿ ಶಶಿಯವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದು, ಸಲ್ಮಾನ್, ಕಬೀರ್ ದುಹಾನ್ ಸಿಂಗ್, ಬುಲೆಟ್ ಪ್ರಕಾಶ್, ಜೈಜಗದೀಶ್, ಸಂದೀಪ್, ಧನರಾಜ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ತಾರಾ ಬಳಗದಲ್ಲಿದ್ದಾರೆ.
ಮ್ಯಾಥ್ಯೂಸ್ ಮನು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಟ ಶಶಿ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಕಿರಣ್ ಅಂಪಾಪುರ ಛಾಯಾಗ್ರಹಣವಿದೆ.