ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ರಾಜ್ಯ ಬಿಜೆಪಿ ಹೊಸ ಯೋಜನೆ ರೂಪಿಸಿದೆ. ಯುವ ಮತದಾರರನ್ನು ಸೆಳೆಯಲು ಹಾಗೂ ಭಾರಿ ಪ್ರಚಾರ ಮಾಡುವ ನಿಟ್ಟಿನಲ್ಲಿ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದೆ.
ಕರ್ನಟಕ ಬಿಜೆಪಿ ಯುವ ಮೋರ್ಚಾ ನಮೋ ಯುವ ಭಾರತ ಫೆಲೋಶಿಪ್ ಕಾರ್ಯಕ್ರಮದಡಿ ರೀಲ್ಸ್ ನಿರ್ಮಾಣ ಸ್ಪರ್ಧೆ ಆಯೋಜಿಸಿದೆ. ಒಂದು ತಿಂಗಳ ಕಾಲ ನಡೆಯಲಿದ್ದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ರೀಲ್ಸ್ ಮಾಡಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಿ ಗರಿಷ್ಠ ಲೈಕ್ಸ್ ಪಡೆದ ಅತ್ಯುತ್ತಮ 10 ರೀಲ್ಸ್ ಗಳನ್ನು ಗುರುತಿಸಲಾಗುವುದು. ಅಂತವರಿಗೆ ಪ್ರಧಾನಿ ನರೇದ್ರ ಮೋದಿ ಭೇಟಿಗೂ ಅವಕಾಶ ದೊರೆಯಲಿದೆ ಎಂದು ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದವರ ಎಲ್ಲಾ ರೀಲ್ಸ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಯುವ ಮೋರ್ಚಾ ಹಂಚಿಕೊಳ್ಳಲಿದೆ. ಅತ್ಯುತ್ತಮವಾದ ಮೂರು ರೀಲ್ಸ್ ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ರಾಜ್ಯ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ಹಂಚಿಕೊಳ್ಳಲಿದ್ದಾರೆ.
ಮಹಿಳೆ, ಯುವಜನತೆ, ಅನ್ನದಾತ ಹಾಗೂ ಬಡವ ಎಂಬ 4 ವಿಭಾಗಗಳಲ್ಲಿ 90 ಸೆಕೆಂಡ್ ಗಳ ರೀಲ್ಸ್ ಮಾಡುವ ಸ್ಪರ್ಧೆ ಇದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಮಾಹಿತಿ ನೀಡಿದೆ.