ಬೆಂಗಳೂರು : ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ತಿರಸ್ಕೃತಗೊಂಡ ಅರ್ಜಿಗಳ ಶಾಲಾ ಆಡಳಿತ ಮಂಡಳಿಗಳು ಪಾವತಿಸಿದ ಚಲನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2024-25ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು https://schooleducation.karnataka.gov.in/ ಅರ್ಜಿಗಳನ್ನು ಸಲ್ಲಿಸಲು ಉಲ್ಲೇಖಿತ (2) ರಲ್ಲಿ ಆಡಳಿತ ಮಂಡಳಿಗೆ ದಿನಾಂಕ:15-03-2024 ರವರೆಗೆ ಅವಧಿ ವಿಸ್ತರಿಸಿ ಅವಕಾಶ ಕಲ್ಪಿಸಲಾಗಿದೆ. ದಿನಾಂಕ:26-02-2024ರಂದು ತಂತ್ರಾಂಶದಲ್ಲಿ ಲಭ್ಯ ವಿರುವ ಹೊಸ ಶಾಲಾ ನೋಂದಣಿ ಪ್ರಕ್ರಿಯೆ ಅಂಕಿಅಂಶವನ್ನು ಪರಿಶೀಲಿಸಲಾಗಿ, ಸ್ವೀಕೃತವಾದ ಒಟ್ಟು ಅರ್ಜಿಗಳು:960, ಅನುಮತಿ ನೀಡಿರುವ ಅರ್ಜಿಗಳ ಸಂಖ್ಯೆ:79, ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ:46 ಆಗಿರುತ್ತವೆ.
ಹೊಸದಾಗಿ 2024-25ನೇ ಸಾಲಿಗೆ ಹೊಸಶಾಲೆ ನೊಂದಣಿಗೆ ದಿನಾಂಕ:15-02-2024 ರವರೆಗೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿಗಳ ಶಾಲಾ ಆಡಳಿತ ಮಂಡಳಿಗಳು ಈ ಹಿಂದೆ ಪಾವತಿ ಮಾಡಿರುವ ಶುಲ್ಕದ ಚಲನ್ ಮೂಲಕವೇ 2024-25ನೇ ಸಾಲಿಗೆ ಹೊಸ ಶಾಲಾ ನೊಂದಣಿಗೆ ತಂತ್ರಾಂಶದ ಮೂಲಕ ದಿನಾಂಕ:15-03-2024ರೊಳಗೆ ಅರ್ಜಿಯನ್ನು ಹೊಸದಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.