HomeKarnatakaಮದುವೆ ಮಂಟಪಗೆ ನುಗ್ಗಿದ ಖತರ್ನಾಕ್ ಖದೀಮ ; 35 ಲಕ್ಷದ ಚಿನ್ನಾಭರಣ ಕದ್ದೊಯ್ದು ಪರಾರಿ..!

ಮದುವೆ ಮಂಟಪಗೆ ನುಗ್ಗಿದ ಖತರ್ನಾಕ್ ಖದೀಮ ; 35 ಲಕ್ಷದ ಚಿನ್ನಾಭರಣ ಕದ್ದೊಯ್ದು ಪರಾರಿ..!

ಧಾರವಾಡ : ಖತರ್ ನಾಕ್ ಖದೀಮನೋರ್ವ ಮದುವೆ ಮಂಟಪದಿಂದಲೇ 35 ಲಕ್ಷದ ಚಿನ್ನಾಭರಣ ಕದ್ದೊಯ್ದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಧಾರವಾಡದ ಸ್ಟಾರ್ ದಿ ಓಸಿಯನ್ ಹೋಟೆಲ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಧಾರವಾಡದ ಗಂಗಾಧರಪ್ಪ ಪಟ್ಟಣಶೆಟ್ಟಿ ಎಂಬುವವರ ಪುತ್ರ ಶರಣಪ್ಪ ಅವರ ಜೊತೆಗೆ ಹುಬ್ಬಳ್ಳಿಯ ಅರುಣ್ ಕುಮಾರ್ ಪುತ್ರಿ ಡಾ.ಪೂಜಾ ವಿವಾಹ ನಡೆಯುತಿತ್ತು. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿದ ಖದೀಮನೋರ್ವ ಚಿನ್ನಾಭರಣ ಎಗರಿಸಿದ್ದಾನೆ.ಈ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular