ಹಾಸನ: ಮಾ.7ರಂದು ಇಂದು ಹಾಸನದಲ್ಲಿ ಖಾಸಗಿ ಕಂಪನಿಗಳಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.
ಹಾಸನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಿರುದ್ಯೋಗ ಯುವಕರಿಗೆ ಮಾ.7ರಂದು ಬೆಳಿಗ್ಗೆ 10.30ರಿಂದ 12.30 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೈಲ್ವೆ ಸ್ಟೇಷನ್ ಹತ್ತಿರ, ಸರ್ಕಾರಿ ಐಟಿಐ ಕಾಲೇಜು ಆವರಣ, ಹಾಸನ, ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ 08172-296374, 9449692691 ಹಾಗೂ 8722606874 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.