ನವದೆಹಲಿ: ನ್ಯೂಸ್ ಪ್ರಿಂಟ್ ಮೇಲಿನ ಶೇಕಡ 5ರಷ್ಟು ಸುಂಕ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಭಾರತೀಯ ನ್ಯೂಸ್ ಪೇಪರ್ ಸೊಸೈಟಿ ಐಎನ್ಎಸ್ ಮನವಿ ಮಾಡಿದೆ.
ಪ್ರಕಾಶಕರು ನಿರ್ವಹಣಾ ವೆಚ್ಚವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡಲು ನ್ಯೂಸ್ ಪ್ರಿಂಟ್ ಮೇಲಿನ ಶೇಕಡ 5ರಷ್ಟು ಕಸ್ಟಮ್ಸ್ ಸುಂಕ ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಜಾಗತಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಸಾಗಾಣೆ ವ್ಯವಸ್ಥೆಯಲ್ಲಿನ ತೊಡಕು, ರೂಪಾಯಿ ಮೌಲ್ಯ ಕುಸಿತ ಮೊದಲಾದ ಕಾರಣಗಳಿಂದ ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಾಗಿದ್ದು, ನ್ಯೂಸ್ ಪ್ರಿಂಟ್ ಕೊರತೆ ಕಂಡು ಬಂದಿದೆ. ದೇಶದ ನ್ಯೂಸ್ ಪೇಪರ್ ಸಂಸ್ಥೆಗಳ ಮೇಲೆ ಇದರಿಂದ ಅಗಾಧವಾದ ಹೊರೆಯಾಗಿದ್ದು, ನ್ಯೂನ್ಯೂಸ್ ಪ್ರಿಂಟ್ ಮೇಲಿನ ಸೀಮಾ ಸುಂಕವನ್ನು ಬಿಡಬೇಕು ಎಂದು ಐಎನ್ಎಸ್ ಅಗ್ರಹಿಸಿದೆ.
ಕಸ್ಟಮ್ಸ್ ಸುಂಕ ಹಿಂತೆಗೆದುಕೊಂಡಲ್ಲಿ ಮುದ್ರಣ ಮಾಧ್ಯಮ ಉದ್ಯಮಕ್ಕೆ ಹೆಚ್ಚು ಅಗತ್ಯವಿರುವ ಪರಿಹಾರ ನೀಡಿದಂತಾಗುತ್ತದೆ. ಪ್ರಕಾಶಕರು ತಮ್ಮ ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಮತ್ತು ಜನರಿಗೆ ವಿಶ್ವಾಸಾರ್ಹ ಸುದ್ದಿ ಮತ್ತು ಮಾಹಿತಿಯ ನಿರಂತರ ಪ್ರಸಾರ ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ವಿಶ್ವದಾದ್ಯಂತ ಮತ್ತು ದೇಶದ ಅನೇಕ ನ್ಯೂಸ್ ಪ್ರಿಂ ಗಿರಣಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ನ್ಯೂಸ್ ಪ್ರಿಂಟ್ ಉತ್ಪಾದನೆ ನಿಲ್ಲಿಸಿವೆ. ಇದರಿಂದ ದೇಶಾದ್ಯಂತ ನ್ಯೂಸ್ ಪ್ರಿಂಟ್ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಮುದ್ರಣ ಮಾಧ್ಯಮ ವಲಯದ ಆಮದು ಅವಲಂಬಿತ ಉದ್ಯಮಗಳ ಮೇಲಿನ ಒತ್ತಡವನ್ನು ರೂಪಾಯಿ ಮೌಲ್ಯ ಕುಸಿತ ಹೆಚ್ಚಿಸಿದೆ. ನ್ಯೂಸ್ ಪ್ರಿಂಟ್ ಆಮದು ವೆಚ್ಚ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.