ಯುಎಸ್ ಶಾಲೆಯಲ್ಲಿ ಅಸಹ್ಯಕರ ಘಟನೆ ನಡೆದಿದ್ದು, ನಿಧಿಸಂಗ್ರಹಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಒಕ್ಲಹೋಮ ಶಾಲೆಯಲ್ಲಿ ಅಮೆರಿಕದ ವಿದ್ಯಾರ್ಥಿಗಳು ಪರಸ್ಪರರ ಕಾಲ್ಬೆರಳುಗಳನ್ನು ಚೀಪುವ ಮತ್ತು ನೆಕ್ಕುವ ಆಘಾತಕಾರಿ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ . ವಿಡಿಯೋದಲ್ಲಿ ವಿದ್ಯಾರ್ಥಿಗಳು ನೆಲದ ಮಲಗಿ ದಾನಿಗಳ ಬೆರಳನ್ನು ನೆಕ್ಕುತ್ತಿರುವುದನ್ನು ಕಾಣಬಹುದಾಗಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಕಾಲ್ಬೆರಳು ಚೀಪುವ ಪಂದ್ಯಾವಳಿಯಂತಹ ವಿವಿಧ ತರಗತಿ ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಸಮಯವನ್ನು ಸ್ವಯಂಪ್ರೇರಿತರಾಗಿ ನೀಡಿದರು. ಈ ಅಭಿಯಾನದಲ್ಲಿ ಒಟ್ಟು 152,830.38 ಡಾಲರ್ (1,26,60,621.51 ರೂ.) ಸಂಗ್ರಹಿಸಲಾಗಿದೆ ಎಂದು ವರದಿಗಳು ತಿಳಿಸಿದೆ.
ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಘಟನೆ ಬಗ್ಗೆ ಒಕ್ಲಹೋಮ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಎಜುಕೇಶನ್ ತನಿಖೆ ನಡೆಸಲು ಸೂಚಿಸಿದೆ. ಒಕ್ಲಹೋಮ ರಾಜ್ಯ ಸೂಪರಿಂಟೆಂಡೆಂಟ್ ರಿಯಾನ್ ವಾಲ್ಟರ್ಸ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಭಯಾನಕ ತುಣುಕಿಗೆ ಪ್ರತಿಕ್ರಿಯಿಸಿದ್ದಾರೆ. “ಇದು ಅಸಹ್ಯಕರವಾಗಿದೆ. ನಮ್ಮ ಸಂಸ್ಥೆ ತನಿಖೆ ನಡೆಸುತ್ತಿದೆ. “ಇದು ಮಕ್ಕಳ ಮೇಲಿನ ದೌರ್ಜನ್ಯ” ಎಂದು ಅವರು ಹೇಳಿದ್ದಾರೆ.