2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾರ್ಚ್ 1 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅರಂಬಾಗ್ಗೆ ಒಂದು ದಿನದ ಪ್ರವಾಸವನ್ನು ಪ್ರಾರಂಭಿಸಿದರು.
7,200 ಕೋಟಿ ರೂ.ಗಳ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ನಡುವೆ, ಅನಿರೀಕ್ಷಿತ ಮತ್ತು ಹೃದಯಸ್ಪರ್ಶಿ ಘಟನೆ ನಡೆದಿದೆ.
ಬಾಲಕಿಯೊಬ್ಬಳು ಜಗನ್ನಾಥನ ವರ್ಣಚಿತ್ರವನ್ನು ಹಿಡಿದುಕೊಂಡು ಅದನ್ನು ಪ್ರಧಾನಿಗೆ ತೋರಿಸಲು ಪ್ರಯತ್ನಿಸಿದ್ದಾಳೆ.ಬಾಲಕಿ ಮತ್ತು ಆಕೆಯ ವರ್ಣಚಿತ್ರವನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣವೇ ತಮ್ಮ ಭದ್ರತಾ ಸಿಬ್ಬಂದಿಗೆ ಕಲಾಕೃತಿಯನ್ನು ತರುವಂತೆ ಸೂಚನೆ ನೀಡಿದರು. ನಂತರ ಬಾಲಕಿಯ ಪೇಟಿಂಗ್ ನ್ನು ಸಭೆಯಲ್ಲಿ ಪ್ರದರ್ಶನ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಕೀಯವನ್ನು ಮೀರಿ, ವಯಸ್ಸು ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ನಾಗರಿಕರೊಂದಿಗೆ ಹೃತ್ಪೂರ್ವಕ ಸಂವಹನ ನಡೆಸುವ ಪ್ರಧಾನಿ ಮೋದಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.