ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ..!! ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸಿಲ್ಲಿ ಅಟೆಂಪ್ಟಾ..!! ನೂರಾರು ಜನ ಸತ್ತರೆ ಮಾತ್ರ ಅದು ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ, ಅದೇ ಹತ್ತು ಜನ ಬಾಂಬ್ ಸ್ಪೋಟದಿಂದ ಗಾಯಗೊಂಡರೆ, ಅದು ನಿಮಗೆ ಸಿಲ್ಲಿ ಅಟೆಂಪ್ಟು.. ಬಾಂಬ್ ಇಟ್ಟವನು ಬ್ರದರ್, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಪ್ರಕಾಶ್ ಪಾಟೀಲ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ತೀವ್ರತೆಯನ್ನು ಸರ್ಕಾರ ಇನ್ನೂ ಅರಿತುಕೊಂಡಿಲ್ಲ. ಬಾಂಬ್ ಸ್ಫೋಟ ಪ್ರಕರಣಕ್ಕೆ ಉಗ್ರ ಸಂಪರ್ಕವಿದೆ. ಪಾಕಿಸ್ಥಾನ ಪರವಾದ ಘೋಷಣೆ ಮತ್ತು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಕಾಕತಾಳೀಯವಲ್ಲ. ಇದರ ಹಿಂದೆ ವ್ಯವಸ್ಥಿತವಾದ ಸಂಚು ಇದೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.