ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ದೇಶದಲ್ಲಿಯೇ ಮೊದಲ ಬಾರಿಗೆ ‘ಪಂಚಮಿತ್ರ Whatsapp Chat’ ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಹಾಗೂ ಗ್ರಾಮೀಣ ಭಾಗದ ಜನರಿಗೆ ಸುಲಲಿತ ಜನಸೇವೆ ನೀಡುವ ಉದ್ದೇಶದಿಂದ “ಪಂಚಮಿತ್ರ Whatsapp Chat” ಅನ್ನು ಪ್ರಾರಂಭಿಸಲಾಗಿದ್ದು, ಇನ್ಮುಂದೆ ರಾಜ್ಯದ ಗ್ರಾಮೀಣ ಭಾಗದ ಜನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಂಬಂಧಪಟ್ಟ ಮಾಹಿತಿ ವಿವರಗಳನ್ನು, ಅಲ್ಲದೇ ಕುಂದು-ಕೊರತೆಗಳನ್ನು ದಾಖಲಿಸಲು, ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯನ್ನು ವಾಟ್ಸಾಪ್ ಚಾಟ್ ಮೂಲಕ ಮೆಸೇಜ್ ಮೂಲಕ ತಿಳಿದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
‘Whatsapp Chat’ No: 8277506000 ನಲ್ಲಿ ಗ್ರಾಮ ಪಂಚಾಯತಿ ಸೇವೆಗಳಿಗೆ ಸಂಬಂಧಪಟ್ಟ ಮಾಹಿತಿ ಪಡೆದು, ಕುಂದುಕೊರತೆಗಳನ್ನು ದಾಖಲಿಸಿಬಹುದಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಸಾದ್ಯವಾದಷ್ಟು ರೀತಿಯಲ್ಲಿ ಜನರಿದ್ದಲ್ಲಿಯೇ ಸರ್ಕಾರವನ್ನು ತಲುಪಿಸುವ ನಿಟ್ಟಿನಲ್ಲಿ ಈ ವಾಟ್ಸಾಪ್ ಚಾಟ್ ಸೇವೆಯ ಮೂಲಕ ಸುಲಲಿತ ಆಡಳಿತವನ್ನು ನೀಡಲು ನಾವು ಕಟುಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.