ಬೆಂಗಳೂರು : ಸರ್ವ ಜನಾಂಗದ ಶಾಂತಿಯ ತೋಟವನ್ನು ಅಶಾಂತಿಯ ತೋಟ ಮಾಡುವುದಕ್ಕೆ ಕಾಂಗ್ರೆಸ್ ಕೊಡುಗೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಅಶಾಂತಿಯ ತೋಟ ಮಾಡುವುದಕ್ಕೆ ಕಾಂಗ್ರೆಸ್ ಕೊಡುಗೆಗಳು ಎಂಬ ಲೀಡ್ ಕೊಟ್ಟ ಬಿಜೆಪಿ ಹಲವು ಉದಾಹರಣೆಗಳನ್ನು ನೀಡಿದೆ.
* ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸೀರ್ ಜಿಂದಾಬಾದ್
* DJ ಹಳ್ಳಿ- KG ಹಳ್ಳಿ ಮತಾಂಧ ಗಲಭೆಕೋರರು ಅಮಾಯಕರು
* ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಿಸಿದವನು ಬ್ರದರ್
* ರಾಮೇಶ್ವರಂ ಕೆಫೆಗೆ ಬೇಳೆ ಬಾತ್ ತರಲು ಕುಕ್ಕರ್ ತಂದಿದ್ದ ಬ್ರದರ್
* ಉಡುಪಿ ಕಾಲೇಜಿನಲ್ಲಿ ತಮಾಷೆಗೆ ವಿಡಿಯೋ ಮಾಡಿದ್ದಾರೆ ಮತಾಂಧ ಸಿಸ್ಟರ್ಸ್
* ಬಂಧಿತರು ಭಯೋತ್ಪಾದಕರು ಎನ್ನಲು ಸಾಧ್ಯವಿಲ್ಲ ಗೃಹ ಸಚಿವರು
ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರದ ಇಂತಹ ಮಾನಸಿಕ ಅಸ್ವಸ್ಥತೆಯಿಂದಲೇ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕರ್ನಾಟಕದ ಶಾಂತಿ ಹಾಳಾಗಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.