ಬೆಂಗಳೂರು : ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು, ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬಹುದು.
ವಾಟ್ಸಾಪ್ ಚಾಟ್ ಆರಂಭಿಸಲಾಗಿದ್ದು, 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.
ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭ
ಸಾರ್ವಜನಿಕರು ಕುಳಿತಲ್ಲೇ ವಾಟ್ಸಾಪ್ ಮೂಲಕ ಗ್ರಾಮ ಪಂಚಾಯಿತಿ ವಿವರ ಹಾಗೂ ಸೇವೆಗಳಿಗೆ ಅರ್ಜಿ ಸಲ್ಲಿಸಲು, ಕುಂದುಕೊರತೆಗಳನ್ನು ದಾಖಲಿಸಲು ಅವಕಾಶ
8277506000 ವಾಟ್ಸಾಪ್ ಚಾಟ್ ಸಂಖ್ಯೆ
ಸೇವೆ ಪಡೆಯಲು: ವಾಟ್ಸಾಪ್ ಸಂಖ್ಯೆಯನ್ನು ಸೇವ್ ಮಾಡಿ, ಹಾಯ್ ಎ೦ದು ಸ೦ದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಹೆಚ್ಚಿನ ಸೇವೆಗಳಿಗೆ ‘ಪಂಚಮಿತ್ರ – ಸಾರ್ವಜನಿಕ ಮಾಹಿತಿ ಪೋರ್ಟಲ್’ಗೆ ಭೇಟಿ ನೀಡಿ: