ಬೆಂಗಳೂರು: ನಕಲಿ ಭೂ ದಾಖಲೆ ಹಾವಳಿ ತಡೆಯುವ ಉದ್ದೇಶದಿಂದ ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಅಭಿಯಾನದಲ್ಲಿ 15 ಲಕ್ಷ ಪಹಣಿ ಮಾಲೀಕರು ಆಧಾರ್ ಸಂಖ್ಯೆ ಜೋಡಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಭಿಯಾನದಲ್ಲಿ ಇದುವರೆಗೆ 8.80 ಲಕ್ಷ ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಚೋಟಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಪಹಣಿಗಳಿಗೆ ಅದರ ಮಾಲೀಕರ ಆಧಾರ್ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 2.30 ಕೋಟಿ ಪಹಣಿ, 3.9 ಕೋಟಿ ಪಹಣಿ ಮಾಲೀಕರು ಇದ್ದು, ಅವರೆಲ್ಲರ ಪಹಣಿಯೊಂದಿಗೆ ಆಧಾರ್ ಜೋಡಣೆ ಮಾಡಲಾಗುತ್ತದೆ. ಸದ್ಯ 15 ಲಕ್ಷ ಪಹಣಿ ಮಾಲೀಕರು ಆಧಾರ್ ಸಂಖ್ಯೆ ಜೋಡಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕ್ರಮದಿಂದ ನಕಲಿ ಭೂ ದಾಖಲೆ ಸೃಷ್ಟಿ ತಡೆಗೋಬಹುದು. ಬೆಳೆ ಪರಿಹಾರ ಸೇರಿದಂತೆ ಇತರ ಸೌಲಭ್ಯ ವಿತರಣೆ ಸುಲಭವಾಗಿದೆ ಎಂದು ಹೇಳಿದ ಸಚಿವರು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದಲ್ಲಿ ಬಾಕಿ ಇರುವ ಪೋಡಿ ಪ್ರಕರಣಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಆಕಾರ್ ಬಂದ್ ಡಿಜಿಟಲೈಸ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.