ಕೆನಡಾದ ಮಾಜಿ ಪ್ರಧಾನಿ ಬ್ರಿಯಾನ್ ಮುಲ್ರೋನಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಮಗಳು ಕ್ಯಾರೋಲಿನ್ ಮುಲ್ರೋನಿ ತಿಳಿಸಿದ್ದಾರೆ.
ನನ್ನ ತಾಯಿ ಮತ್ತು ನಮ್ಮ ಕುಟುಂಬದ ಪರವಾಗಿ, ನನ್ನ ತಂದೆ, ಕೆನಡಾದ 18 ನೇ ಪ್ರಧಾನ ಮಂತ್ರಿ ಗೌರವಾನ್ವಿತ ಬ್ರಿಯಾನ್ ಮುಲ್ರೋನಿ ಅವರ ನಿಧನವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ ಎಂದು ನಿಧನದ ಸುದ್ದಿಯನ್ನು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ತನ್ನ ತಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದರು ಎಂದು ಕ್ಯಾರೋಲಿನ್ ಈ ಹಿಂದೆ ಹೇಳಿದ್ದರು.