ಗಾಝಾ : ಗಾಝಾ ನಗರದ ಬಳಿ ಸಹಾಯಕ್ಕಾಗಿ ಕಾಯುತ್ತಿದ್ದ ಜನರ ಮೇಲೆ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 104 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು 280 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆ ಸ್ಥಳದಲ್ಲಿ ಶೆಲ್ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ತಿಳಿಸಿದ್ದಾರೆ. ಉತ್ತರ ಗಾಝಾಕ್ಕೆ ಸಹಾಯ ಟ್ರಕ್ಗಳು ಬಂದಾಗ ತಳ್ಳಿದ ಮತ್ತು ತುಳಿದ ಪರಿಣಾಮವಾಗಿ ಹಲವು ಜನರು ಗಾಯಗೊಂಡಿದ್ದಾರೆ ಎಂದು ಮಿಲಿಟರಿ ನಂತರ ತಿಳಿಸಿದೆ.
ನಬುಲ್ಸಿ ವೃತ್ತದಲ್ಲಿ ಸಹಾಯ ಟ್ರಕ್ ಗಳಿಗಾಗಿ ಕಾಯುತ್ತಿದ್ದ ಜನರ ವಿರುದ್ಧ ಇಸ್ರೇಲ್ ಆಕ್ರಮಿತ ಸೇನೆ ಇಂದು ಬೆಳಿಗ್ಗೆ ನಡೆಸಿದ ಕೊಳಕು ಹತ್ಯಾಕಾಂಡವನ್ನು ಖಂಡಿಸುತ್ತೇನೆ” ಎಂದು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಕಚೇರಿ ತಿಳಿಸಿದೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಗೆನುಗ್ಗಿ ಸುಮಾರು 1,200 ಜನರನ್ನು ಕೊಂದು 253 ಒತ್ತೆಯಾಳುಗಳನ್ನು ವಶಪಡಿಸಿಕೊಂಡಿತು ಎಂದು ಇಸ್ರೇಲ್ ಅಂಕಿಅಂಶಗಳು ತಿಳಿಸಿವೆ. ಅಂದಿನಿಂದ ಈ ಪ್ರದೇಶದಲ್ಲಿ 30,000 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ, ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ನಂಬಲಾಗಿದೆ.