ಮಹಾಮಾರಿ ಕ್ಯಾನ್ಸರ್ ಗೆ ಜನಪ್ರಿಯ ಗಾಯಕಿ ಕ್ಯಾಟ್ ‘ಜಾನಿಸ್ ಸಾರ್ಕೋಮಾ’ ಬಲಿಯಾಗಿದ್ದಾರೆ. ತನ್ನ ಕೊನೆಯ ಹಾಡನ್ನು ಮಗನಿಗೆ ಅರ್ಪಿಸಿದ ನಂತರ ಗಾಯಕಿ ಕ್ಯಾಟ್ ಜಾನಿಸ್ ನಿಧನರಾಗಿದ್ದಾರೆ. 31 ವರ್ಷದ ಅವರು ಸಾರ್ಕೋಮಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.
ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬವು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ನಲ್ಲಿ ಪ್ರಕಟಿಸಿದೆ. “ಕಳೆದ ಕೆಲವು ತಿಂಗಳುಗಳಲ್ಲಿ ಕ್ಯಾಥರೀನ್ ಮತ್ತು ನಮ್ಮ ಕುಟುಂಬವು ಪಡೆದ ಪ್ರೀತಿಗೆ ನಾವು ಶಾಶ್ವತವಾಗಿ ಕೃತಜ್ಞರಾಗಿದ್ದೇವೆ ಎಂದಿದೆ.
ನೆಟ್ಟಿಗರು ಜಾನಿಸ್ ಸಾರ್ಕೋಮಾ ಹಾಡಿ ಹಾಡುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಾಯಕಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.