ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ನಿಜವಾಗಿದ್ದರೆ ಅಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ FSL ವರದಿ ಬರುವ ಮುನ್ನವೇ BJPಯವರು ಅಪರಾಧ ನಿರ್ಣಯಕ್ಕೆ ಬಂದಿದ್ದಾರೆ. BJPಯವರಿಗೆ ಇಷ್ಟೊಂದು ಆತುರವೇಕೆ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ನಿಜವಾದರೆ ಅಂತಹ ದೇಶದ್ರೋಹಿಗಳಿಗೆ ನಮ್ಮ ಸರ್ಕಾರ ತಕ್ಕಶಾಸ್ತಿ ಕಲಿಸದೇ ಬಿಡುವುದಿಲ್ಲ. ಆದರೆ ಇಲ್ಲಿ ಘೋಷಣೆ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಅದು ‘ನಾಸೀರ್ ಸಾಬ್ ಜಿಂದಾಬಾದೋ? ಅಥವಾ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯೋ ಎಂಬುದು ತಿಳಿಯಬೇಕು. ಅದು FSL ವರದಿ ಬಂದ ನಂತರ ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಕಾಯಲು BJPಯವರಿಗೆ ತಾಳ್ಮೆ ಇಲ್ಲವೆಂದರೆ ಹೇಗೆ.? ಎಂದು ಹೇಳಿದ್ದಾರೆ.