![](https://kannadadunia.com/wp-content/uploads/2024/02/Shuchi-yojane.jpg)
ಬೆಂಗಳೂರು ; ರಾಜ್ಯ ಸರ್ಕಾರವು ಇಂದು ಮತ್ತೊಂದು ಮಹತ್ವದ ಯೋಜನೆಗೆ ಮರು ಚಾಲನೆ ನೀಡಲಿದೆ. ರಾಜ್ಯದಲ್ಲಿ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ʼಶುಚಿ ಯೋಜನೆʼ ಮರು ಜಾರಿಯಾಗುತ್ತಿದೆ.
ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಸರ್ಕಾರದ ಮಹತ್ತರ ʼಶುಚಿ ಯೋಜನೆʼಗೆ ಸನ್ಯಾನ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮರುಚಾಲನೆ ನೀಡಲಿದ್ದಾರೆ.
ಶುಚಿ ಯೋಜನೆ
ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಸರ್ಕಾರದ ಮಹತ್ತರ ಯೋಜನೆ
ಹದಿಹರೆಯದ ಹೆಣ್ಣುಮಕ್ಕಳಲ್ಲಿ ಋತುಸ್ರಾವದ ನೈರ್ಮಲ್ಯ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಬಳಕೆ ಬಗ್ಗೆ ಅರಿವು ಮೂಡಿಸಲು ‘ಶುಚಿ ಯೋಜನೆ’ ಮರು ಜಾರಿ
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿನಿಯರಿಗೆ ಉಚಿತ ‘ಶುಚಿ ಸ್ಯಾನಿಟರಿ ನ್ಯಾಪ್ಕಿನ್’ಗಳ ವಿತರಣೆ
6 ರಿಂದ 12ನೇ ತರಗತಿ ಓದುತ್ತಿರುವ ಸುಮಾರು 19 ಲಕ್ಷ ಹದಿಹರೆಯದ ಹೆಣ್ಣು ಮಕ್ಕಳಿಗೆ ‘ಶುಚಿ ಯೋಜನೆ’ಯಿಂದ ಅನುಕೂಲವಾಗಲಿದೆ.