ಕೊಪ್ಪಳ : ಚರಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗಂಗಾವತಿಯ ಎಪಿಎಂಸಿ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಪಂಪಾವತಿ ಹಾಗೂ ಅಕ್ಕಮ್ಮ ದಂಪತಿಯ ಪವಿತ್ರಾ ಎಂಬ ಮಗು ಮೃತಪಟ್ಟಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣೆಯಾಗಿತ್ತು, ನಂತರ ಹುಡುಕಾಡಿದಾಗ ಚರಂಡಿಯಲ್ಲಿ ಮಗು ಶವ ಪತ್ತೆಯಾಗಿದೆ.
ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚರಂಡಿ ಮುಚ್ಚದೇ ಹಾಗೇ ಬಿಟ್ಟ ನಗರಸಭೆ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಮಗು ಬಲಿಯಾಗಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.