ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ತಮ್ಮ ಮುಂದಿನ ಚಿತ್ರ ‘ಬಡೇ ಮಿಯಾ ಚೋಟೆ ಮಿಯಾ’ ಪ್ರಚಾರಕ್ಕಾಗಿ ಫೆಬ್ರವರಿ 26 ರಂದು ಲಕ್ನೋಗೆ ಹೋಗಿದ್ದು, ಈ ವೇಳೆ ಅಭಿಮಾನಿಗಳು ಚಪ್ಪಲಿ ತೂರಿದ ಘಟನೆ ನಡೆದಿದೆ.
ಚಿತ್ರದ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ತಳ್ಳಾಟ-ನೂಕಾಟ ನಡೆದಿದೆ. ಪರಿಣಾಮ ಕೆಲವರು ಕಲ್ಲುಗಳು ಮತ್ತು ಚಪ್ಪಲಿಗಳನ್ನು ಪರಸ್ಪರ ಎಸೆದುಕೊಂಡಿದ್ದಾರೆ. ಈ ವೇಳೆ ನಟರ ಮೇಲೆ ಕೂಡ ಚಪ್ಪಲಿಗಳು ತೂರಿಬಂದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿದರು.
ಅಭಿಮಾನಿಗಳು ಅಕ್ಷಯ್ ಕುಮಾರ್ ಹಾಗೂ ಟೈಗರ್ ಗೆ ಹಾಡು ಹೇಳುವಂತೆ ಮನವಿ ಮಾಡಿದ್ದರು. ಮತ್ತೆ ಕೆಲವರು ಇ ಹಲವು ಬೇಡಿಕೆಗಳನ್ನು ಇಬ್ಬರು ನಟರ ಮುಂದಿಟ್ಟಿದ್ದರು. ಆದರೆ, ನೋಡ ನೋಡುತ್ತಿದ್ದಂತೆ ಅಭಿಮಾನಿಗಳ ನಡುವೆ ಗಲಾಟೆ ಆಗಿದೆ. ಲಕ್ನೋದ ಕ್ಲಾಕ್ ಟವರ್ ಬಳಿ ಈ ಘಟನೆ ನಡೆದಿದ್ದು, ಅಕ್ಷಯ್ ಮತ್ತು ಟೈಗರ್ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ.