ಬೆಂಗಳೂರು : ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ನಡುವಿನ ವಾಕ್ಸಮರ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಟಕ್ಕರ್ ನೀಡಲು ದರ್ಶನ್ ಅಭಿಮಾನಿಗಳು ‘ಡಿ ಬಾಸ್ ಜಿಂದಾಬಾದ್’ ರ್ಯಾಲಿ ನಡೆಸಲಿದ್ದಾರೆ.
ಬೊಮ್ಮನಹಳ್ಳಿಯಲ್ಲಿ (ಫೆ.26 ) ಇಂದು ದರ್ಶನ್ ಅಭಿಮಾನಿಗಳು ಬೃಹತ್ ರ್ಯಾಲಿ ನಡೆಸಲಿದ್ದು, ಮಹಾ ಗಣಪತಿ ದೇವಸ್ಥಾನದಿಂದ ಹೆಚ್ ಎಸ್ ಆರ್ ಲೇಔಟ್ ಬಿಡಿಎಂ ಕಾಂಪ್ಲೆಕ್ಸ್ ವರೆಗೆ ಬೈಕ್ ರ್ಯಾಲಿ ನಡೆಯಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಮುಂದಿನ ಬಾರಿ ಕೂಡ ಮತ್ತೆ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಲು ತಯಾರಿ ನಡೆಸಿದ್ದಾರೆ. . ಬೈಕ್ ರ್ಯಾಲಿ ವೇಳೆ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ವಾಗ್ವಾದ ನಡೆಯುವ ಸಂಭವವಿದ್ದು, ಪೊಲೀಸರು ಎಚ್ಚರ ವಹಿಸಿದ್ದಾರೆ.