ಲಕ್ನೋ : ಆನ್ ಲೈನ್ ಗೇಮ್ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ಮಾಡಿದ ಸಾಲಗಳನ್ನು ತೀರಿಸುವುದಕ್ಕಾಗಿ ತನ್ನ ತಾಯಿಯನ್ನು ಕೊಲೆ ಮಾಡಿದ ಶಾಕಿಂಗ್ ಘಟನೆ ಉತ್ತರ ಪ್ರದೇಶದ ಫತೇಪುರ್ ನಲ್ಲಿ ನಡೆದಿದೆ.
ಆರೋಪಿಯನ್ನು ಹಿಮಾಂಶು ಎಂದು ಗುರುತಿಸಲಾಗಿದ್ದು, 50 ಲಕ್ಷ ರೂ.ಗಳ ವಿಮಾ ಪ್ರಯೋಜನವನ್ನು ಪಡೆಯಲು ತನ್ನ ತಾಯಿಯನ್ನು ಕೊಂದು, ನಂತರ ಶವವನ್ನು ಯಮುನಾ ನದಿಯ ದಡದ ಬಳಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ ಹಿಮಾಂಶು ಜನಪ್ರಿಯ ಪ್ಲಾಟ್ಫಾರ್ಮ್ ನಲ್ಲಿ ಗೇಮಿಂಗ್ ಗೆ ವ್ಯಸನಿಯಾಗಿದ್ದನು. ಆಟದ ಚಟಕ್ಕೆ ಬಿದ್ದ ಈತ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದನು. ಸುಮಾರು 4 ಲಕ್ಷ ರೂ.ಗಳ ಸಾಲ ಮಾಡಿಕೊಂಡಿದ್ದ ವ್ಯಕ್ತಿ ತನ್ನ ಸಾಲಗಳನ್ನು ಮರುಪಾವತಿಸಲು ಇನ್ಸೂರೆನ್ಸ್ ಹಣ ಪಡೆಯಲು ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹಿಮಾಂಶು ತನ್ನ ಚಿಕ್ಕಮ್ಮನ ಆಭರಣಗಳನ್ನು ಕದ್ದು ಮತ್ತು ಅದರಿಂದ ಬಂದ ಹಣವನ್ನು ತನ್ನ ಹೆತ್ತವರಿಗೆ ತಲಾ 50 ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಬಳಸಿದ್ದಾನೆ ಎಂದು ಫತೇಪುರದ ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ. ನಂತರ, ತಂದೆ ಇಲ್ಲದಿದ್ದಾಗ, ಅವನು ತನ್ನ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ, ಶವವನ್ನು ಚೀಲದಲ್ಲಿ ಹಾಕಿ ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಸಾಗಿಸಿದ್ದಾನೆ ಎಂದು ತಿಳಿಸಿದ್ದಾರೆ.