ಗ್ರಾಹಕರ ಸೋಗಿನಲ್ಲಿ 75 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕಳವು

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಎಂಜಿ ರಸ್ತೆಯ ಆಭರಣ ಮಳಿಗೆಗೆ ಹೋಗಿದ್ದ ಕಳ್ಳನೊಬ್ಬ 75 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರ ಕದ್ದೊಯ್ದ ಘಟನೆ ನಡೆದಿದೆ.

ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಫೆಬ್ರವರಿ 18ರಂದು ಸಂಜೆ ಗ್ರಾಹಕರು ಹೆಚ್ಚಾಗಿದ್ದ ಸಮಯದಲ್ಲಿ ಮಳೆಗೆಗೆ ಹೋದ ಆರೋಪಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಅಸಲಿ ಉಂಗುರವನ್ನು ಕದ್ದು ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ನಕಲಿ ಉಂಗುರವನ್ನು ಟೇಬಲ್ ಮೇಲೆ ಇಟ್ಟಿದ್ದು, ಬಳಿಕ ಡಿಸೈನ್ ಸರಿಯಾಗಿಲ್ಲ ಎಂದು ಹೊರಟು ಹೋಗಿದ್ದಾನೆ.

ಮಳಿಗೆಯಲ್ಲಿ ಮರುದಿನ ಆಭರಣಗಳ ಪರಿಶೀಲಿಸಿದಾಗ ನಕಲಿ ವಜ್ರದ ಉಂಗುರ ಪತ್ತೆಯಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕದ್ದೊಯ್ದಿರುವುದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read