BIG NEWS : ಹೊಸದಾಗಿ ಆರಂಭಿಸಿದ ಶಾಲೆಗಳ ನೋಂದಣಿಗೆ ಅವಧಿ ವಿಸ್ತರಣೆ : ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು : 2024-25ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2024-25ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು https://schooleducation.karnataka.gov.in/ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:15-02-2024 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ದಿನಾಂಕ:16-02-2024ರಂದು ತಂತ್ರಾಂಶದಲ್ಲಿ ಲಭ್ಯ ಅಂಕಿಅಂಶವನ್ನು ಪರಿಶೀಲಿಸಲಾಗಿ, 115 ಅರ್ಜಿಗಳು ಶುಲ್ಕ ಪಾವತಿಸಿ ಅಂತಿಮವಾಗಿ ಸಬ್ಮಿಟ್ ಮಾಡದೇ ಶಾಲಾ ಆಡಳಿತ ಮಂಡಳಿಯ ಲಾಗಿನ್ನಲ್ಲಿ ಬಾಕಿ ಇರುವುದು ಕಂಡುಬಂದಿರುತ್ತದೆ. ಹಾಗೂ ಹೊಸ ಶಾಲಾ ನೊಂದಣಿಗೆ ಅವಧಿಯನ್ನು ವಿಸ್ತರಿಸುವಂತೆ ಆಡಳಿತ ಮಂಡಳಿಗಳಿಂದ ಮನವಿಗಳು ನೇರವಾಗಿ ಈ ಕಛೇರಿಗೆ ಸ್ವೀಕೃತವಾಗಿರುತ್ತವೆ.

ಅದರಂತೆ ಪರಿಶೀಲಿಸಿದ್ದು, 2024-25ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಅಂತಿಮವಾಗಿ ದಿನಾಂಕ:15-03-2024ರವರೆಗೆ ಅವಕಾಶ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read