ಸುಳ್ಳು ಮಾಹಿತಿ ನೀಡಿ ʻಕಾರ್ಮಿಕ ಕಾರ್ಡ್ʼ ಪಡೆದವರಿಗೆ ಬಿಗ್ ಶಾಕ್‌ : ಶೀಘ್ರವೇ ಮನೆ ಮನೆ ಸರ್ವೆ

ಬೆಂಗಳೂರು : ಸುಳ್ಳು ಮಾಹಿತಿ ನೀಡಿ ಕಾರ್ಮಿಕ ಕಾರ್ಡ್‌ ಪಡೆದವರಿಗೆ ರಾಜ್ಯ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ಶೀಘ್ರವೇ ಮನೆ ಮನೆ ಸರ್ವೆ ಮಾಡಿ ಅನರ್ಹ ಕಾರ್ಮಿಕ ಕಾರ್ಡ್‌ ಗಳನ್ನು ರದ್ದು ಮಾಡುವುದಾಗಿ ಸಚಿವ ಸಂತೋಷ್‌ ಲಾಡ್‌ ಹೇಳಿದಾರೆ.

ವಿಧಾನಪರಿಷತ್‌ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ಸಂತೋಷ್‌ ಲಾಡ್‌, ರಾಜ್ಯಾದ್ಯಂತ 3,54,128 ಅನರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿಯನ್ನು ಪತ್ತೆ ಹಚ್ಚಲಾಗಿದೆ. ಈ ಅನರ್ಹ ಕಾರ್ಮಿಕ ಕಾರ್ಡ್‌ ಗಳನ್ನು ಶಾಶ್ವಾತವಾಗಿ ರದ್ದುಪಡಿಸುವಂತೆ ಕಾರ್ಮಿಕ ಮಂಡಳಿಗೆ ತಿಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 51 ಲಕ್ಷ ಕಾರ್ಮಿಕ ಕಾರ್ಡ್‌ ಗಳನ್ನು ನೀಡಲಾಗಿದೆ. ಫೆರಾರಿ ಕಾರ್‌, ೫೦ ಎಕರೆ ಜಮೀನು ಹೊಂದಿದವರು, ಶ್ರೀಮಂತರೂ ಸಹ ಕಾರ್ಮಿಕ ಕಾರ್ಡ್‌ ಹೊಂದಿದ್ದಾರೆ ಎಂಬ ಮಾಹಿತಿ ಇದ್ದು, ಇದನ್ನು ಪತ್ತೆ ಹಚ್ಚಿ ರದ್ದು ಮಾಡುವುದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read