ಚಾಮರಾಜನಗರ : ಕೊಡಲಿಯಿಂದ ಕೊಚ್ಚಿ ಮಾವನೇ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಜನ್ನೂರಿನಲ್ಲಿ ನಡೆದಿದೆ.
ನಂಜುಡಯ್ಯ ಎಂಬಾತ ತನ್ನ ಅಳಿಯ ಉಮೇಶ್ ನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಳಿಯ ಉಮೇಶ್ ನಿತ್ಯ ಕುಡಿದು ಬಂದು ಮಗಳಿಗೆ ತೊಂದರೆ ಕೊಡುತ್ತಿದ್ದನು ಎನ್ನಲಾಗಿದೆ. ಇದನ್ನು ನೋಡಿ ಬೇಸತ್ತ ಮಾವ ಉಮೇಶ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.