ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದು, ಈ ಮೂಲಕ ಪೊಲೀಸರ ವರ್ಗಾವಣೆ ಅವಧಿ 2 ವರ್ಷಕ್ಕೆ ಏರಿಕೆ ಆಗಲಿದೆ.
ಪೊಲೀಸರ ವರ್ಗಾವಣೆ ಅವಧಿ ಮಿತಿಯನ್ನು 2 ವರ್ಷಕ್ಕೆ ಏರಿಕೆ ಮಾಡುವ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ 2024 ನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಯಿತು. ನಿಯಮದ ಪ್ರಕಾರ ಪೊಲೀಸರ ವರ್ಗಾವಣೆ ಅವಧಿ ಮಿತಿ ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಇದೀಗ ವಿಧೇಯಕದ ಮೂಲಕ ಮಿತಿಯನ್ನು ಎರಡು ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಪೊಲೀಸರ ವರ್ಗಾವಣೆ ಅವಧಿ ಮಿತಿಯನ್ನು ಏರಿಕೆ ಮಾಡುವ ಬಗ್ಗೆ ಶಂಕರ್ ಬಿದರಿಯವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದರು. ನಂತರ ಗೃಹ ಸಚಿವರು ಕೂಡ ಇದನ್ನು ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ಪೊಲೀಸರ ವರ್ಗಾವಣೆ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಏರಿಕೆ ಮಾಡಲು ಅವಕಾಶ ಇರುವ ವಿಧೇಯಕ ಇದಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.