alex Certify ಫಾರ್ಟಿಂಗ್‌ ಎಷ್ಟು ಆರೋಗ್ಯಕರ….? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾರ್ಟಿಂಗ್‌ ಎಷ್ಟು ಆರೋಗ್ಯಕರ….? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆಗಾಗ ಫಾರ್ಟಿಂಗ್‌ (ಹೂಸು ಬಿಡುವುದು) ಸಾಮಾನ್ಯ. ಸಾರ್ವಜನಿಕ ಸ್ಥಳದಲ್ಲಿ ಅಥವಾ ಸ್ನೇಹಿತರ ನಡುವೆ ಈ ರೀತಿ ಆದರೆ ಸಹಜವಾಗಿಯೇ ನಮಗೆ ಮುಜುಗರವಾಗುತ್ತದೆ. ಕೆಲವೊಮ್ಮೆ ಹೂಸನ್ನು ನಿಯಂತ್ರಿಸುವುದು ಬಹಳ ಕಷ್ಟ. ದೊಡ್ಡ ಶಬ್ಧವಾಗಿ ಅವಮಾನಕ್ಕೂ ಇದು ಕಾರಣವಾಗಬಹುದು.

ಇದನ್ನು ನಿಯಂತ್ರಿಸಬೇಕೆ ? ಅಥವಾ ಫಾರ್ಟಿಂಗ್‌ ಸೂಕ್ತವೇ ಎಂಬುದನ್ನು ತಜ್ಞರೇ ವಿವರಿಸಿದ್ದಾರೆ. ಅಷ್ಟೇ ಅಲ್ಲ ಹೂಸು ಬಿಡುವಿಕೆ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನೆಲ್ಲ ನೋಡೋಣ.

ಫಾರ್ಟಿಂಗ್‌ ಒಳ್ಳೆಯದೇ ಅಥವಾ ಕೆಟ್ಟದ್ದೇ ?

ವೈದ್ಯರ ಪ್ರಕಾರ ಹೂಸು ಬಿಡುವಿಕೆ ಅಥವಾ ಫಾರ್ಟಿಂಗ್‌ ಸಾಮಾನ್ಯ ಮತ್ತು ಆರೋಗ್ಯಕರ ಪ್ರಕ್ರಿಯೆ. ಇದು ಜೀರ್ಣಕ್ರಿಯೆಯ ಸಮಯದಲ್ಲಿ ರೂಪುಗೊಳ್ಳುವ ನೈಸರ್ಗಿಕ ಅನಿಲವನ್ನು ತೆಗೆದುಹಾಕಲು ದೇಹವೇ ಆಯ್ಕೆ ಮಾಡಿಕೊಂಡಿರುವ ಒಂದು ಮಾರ್ಗವಾಗಿದೆ. ದಿನಕ್ಕೆ 25 ಬಾರಿ ಹೂಸು ಬಿಡುವುದು ಸರ್ವೇ ಸಾಮಾನ್ಯ ಎನ್ನುತ್ತಾರೆ ವೈದ್ಯರು.

ಹೆಚ್ಚಿನ ಪ್ರಮಾಣದ ಫೈಬರ್, ಸಕ್ಕರೆ ಅಥವಾ ಆಲ್ಕೋಹಾಲ್ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಫಾರ್ಟಿಂಗ್‌ ಕೂಡ ವಿಪರೀತವಾಗಿರುತ್ತದೆ. ಇದರ ಹೊರತಾಗಿ ಗರ್ಭಧಾರಣೆ ಮತ್ತು ಋತುಚಕ್ರದಂತಹ ಇತರ ಅಂಶಗಳೂ ಇದಕ್ಕೆ ಕಾರಣವಾಗುತ್ತವೆ.

ಫಾರ್ಟಿಂಗ್‌ ನಿಯಂತ್ರಣ ಹೇಗೆ?

ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿಯಾಗುತ್ತಿದ್ದರೆ ಕೆಲವು ವಿಧಾನಗಳನ್ನು ಅಳವಡಿಸಿಕೊಂಡು ಅದನ್ನು ನಿಯಂತ್ರಿಸಬಹುದು. ಒಂದೇ ಬಾರಿಗೆ ಹೆಚ್ಚು ತಿನ್ನುವುದು ಹೊಟ್ಟೆಯ ಮೇಲೆ ಹೊರೆಯನ್ನು ಉಂಟುಮಾಡುತ್ತದೆ. ಇದು ಹೆಚ್ಚು ಅನಿಲ ರಚನೆಗೆ ಕಾರಣವಾಗಬಹುದು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಆಗಾಗ್ಗೆ ತಿನ್ನುವುದನ್ನು ರೂಢಿಮಾಡಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಬೇಗನೆ ತಿನ್ನುವುದು ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದಲೂ ಈ ರೀತಿಯ ಗ್ಯಾಸ್ಟ್ರಿಕ್‌ ಆಗಬಹುದು. ಈ ಗಾಳಿಯು ಹೊಟ್ಟೆಯಲ್ಲಿ ಸಿಲುಕಿಕೊಳ್ಳುತ್ತದೆ, ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ನಿಧಾನವಾಗಿ ಅಗಿಯುವುದರಿಂದ ಮತ್ತು ನೀರು ಕುಡಿಯುವುದರಿಂದ ಗಾಳಿ ಒಳಗೆ ಹೋಗದಂತೆ ತಡೆಯಬಹುದು. ಇದು ಅನಿಲ ರಚನೆಯನ್ನು ಕಡಿಮೆ ಮಾಡುತ್ತದೆ.

ವೈದ್ಯಕೀಯ ಸಲಹೆಯಿಲ್ಲದೆ ಪ್ರತಿಜೀವಕಗಳಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಹಾನಿಯಾಗುತ್ತದೆ. ಈ ಬ್ಯಾಕ್ಟೀರಿಯಾಗಳ ಸಮತೋಲನವು ತೊಂದರೆಗೊಳಗಾದಾಗ, ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು, ಇದರಲ್ಲಿ ಗ್ಯಾಸ್ ಸಮಸ್ಯೆಗಳು ಸಹ ಸೇರಿವೆ.

ಹೊಟ್ಟೆ ನೋವು, ಹೊಟ್ಟೆ ಸೆಳೆತ ಅಥವಾ ಅತಿಸಾರದಂತಹ ಇತರ ಸಮಸ್ಯೆಗಳ ಜೊತೆಗೆ ಅತಿಯಾದ ಗ್ಯಾಸ್ ಇದ್ದರೆ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...