ರೇಷ್ಮೆ ನೂಲು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ: ಕಾರ್ಮಿಕ ಸಾವು

ರಾಮನಗರ: ರೇಷ್ಮೆ ನೂಲು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕ ಸಾವನ್ನಪ್ಪಿದ್ದಾರೆ. ರಾಮನಗರದ ಟಿಪ್ಪು ಬಡಾವಣೆಯ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ತಲೆ ಛಿದ್ರವಾಗಿ ಸನಾವುಲ್ಲಾ ಖಾನ್(63) ಮೃತಪಟ್ಟಿದ್ದಾರೆ. ಬಾಯ್ಲರ್ ಗೆ ಸೌದೆ ಹಾಕುವಾಗ ಏಕಾಏಕಿ ಸ್ಪೋಟಗೊಂಡು ಅನಾಹುತ ಸಂಭವಿಸಿದೆ. ಕಾರ್ಖಾನೆಯಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಉಳಿದ ಕಾರ್ಮಿಕರು ದೂರವಿದ್ದ ಕಾರಣ ಬಚಾವಾಗಿದ್ದಾರೆ. ಅಕ್ರಂ ಪಾಷಾ ಎಂಬವರಿಗೆ ಸೇರಿದ ನೂಲಿನ ಯಂತ್ರದ ಕಾರ್ಖಾನೆ ಇದಾಗಿದ್ದು, ಕಾರ್ಖಾನೆ ಮಾಲೀಕ ಅಕ್ರಂ ಪಾಷಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಮನಗರ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read