![](https://kannadadunia.com/wp-content/uploads/2024/02/job-1.png)
ಬೆಂಗಳೂರು : ಮಾನ್ಯ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ದಿ, ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆಯಿಂದ ರಾಜ್ಯ ಮಟ್ಟದ ಯುವ ಸಮೃದ್ಧಿ ಸಮ್ಮೇಳನ ಬ್ರಹತ್ ಉದ್ಯೋಗ ಮೇಳವನ್ನು ಫೆ,26 ರಿಂದ 27 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಭಾಗವಹಿಸುವಂತಹ ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ, ಐಐಟಿಐ, ದಿಪ್ಲೋಮಾ, ಬಿ.ಕಾಂ. ಬಿಎ.ಬಿಎಸ್‍ಸಿ, ಬಿ.ಇ, ಎಂಬಿಎ, ಎಂಸಿಎ, ಎಮ್‍ಎಸ್‍ಡಬ್ಲೂ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾದ ಆಸಕ್ತ ಎಲ್ಲ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಭಾಗಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ http://udyogamela.skillconnect.kaushalkar.com ಜಾಲತಾಣಕ್ಕೆ ಭೇಟಿ ನೀಡಿ ಮಹಿತಿಯನ್ನು ಪಡೆಯಬಹುದು.