ಬೆಂಗಳೂರು : ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಏನಿಲ್ಲ.. ಏನಿಲ್ಲ.. ಕರಿಮಣಿ ಮಾಲೀಕ ಎನ್ನುವ ರೀಲ್ಸ್ ಕಾಣುತ್ತದೆ. ಇದೀಗ ಈ ಕರಿಮಣಿ ಮಾಲೀಕ ರೀಲ್ಸ್ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಬಿಜೆಪಿಯವರು ಬಜೆಟ್ ಕುರಿತು ಏನಿಲ್ಲ.. ಏನಿಲ್ಲ.. ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಕವನದ ಮೂಲಕ ತಿರುಗೇಟು ನೀಡಿದೆ.
ಏನಿಲ್ಲ ಏನಿಲ್ಲ…
ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,
ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ,
ಅರ್ಥ ವ್ಯವಸ್ಥೆಯ ಬಗ್ಗೆ ತಿಳಿದೇ ಇಲ್ಲ,
ಕನ್ನಡಿಗರ ಮೇಲೆ ಕಾಳಜಿ ಇಲ್ಲ,
ಶಾಂತಿ ಸಹಬಾಳ್ವೆ ಸಹಿಸೋದಿಲ್ಲ,
ಏನಿಲ್ಲ ಏನಿಲ್ಲ…
ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ,
ಅವರು ಹೇಳುವುದೆಲ್ಲ ನಿಜವಲ್ಲ,
ನಂಬಿಕೆಗೆ ಅರ್ಹರು ಅವರಲ್ಲ,
ಜನಪರ ಚಿಂತನೆ ಇಲ್ಲವೇ ಇಲ್ಲ,
ಜನರ ಕಷ್ಟವು ಅವರಿಗೆ ಬೇಕಿಲ್ಲ,
ಏನಿಲ್ಲ ಏನಿಲ್ಲ…
ಬಿಜೆಪಿ ಹೃದಯದಲಿ ಏನೂ ಇಲ್ಲ,
ಕರುಣೆ, ಪ್ರೀತಿಯು ತಿಳಿದಿಲ್ಲ.
ಮಾನವೀಯತೆಯಂತೂ ಇಲ್ಲವೇ ಇಲ್ಲ,
ಏನಿಲ್ಲ, ಏನಿಲ್ಲ…
ಕರ್ನಾಟಕದ ಯಜಮಾನರು ನೀವಲ್ಲ!